HEALTH TIPS

ಇಟಲಿಯಲ್ಲಿ 'ಡೆಲ್ಟಾ' ಜೊತೆಗೆ ಕಪ್ಪಾ 'ತಳಿ' ಕೊರೊನಾ ವೈರಸ್‌ನ ಹಾವಳಿ

           ಮಿಲಾನ್‌ಕೊರೊನಾ ವೈರಸ್‌ನ ರೂಪಾಂತರ ತಳಿ ಡೆಲ್ಟಾ ಮತ್ತು ಅದರ ಜೊತೆಗೇ ರೂಪಾಂತರಗೊಂಡಿರುವ ಕಪ್ಪಾ ತಳಿಯಿಂದಾಗಿ ಕಳೆದ ತಿಂಗಳು ಇಟಲಿಯಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗಿವೆ. ದೇಶದ ಒಟ್ಟು ಕೋವಿಡ್‌ ಪ್ರಕರಣಗಳಲ್ಲಿ ಈ ಎರಡೂ ಮಾದರಿಯ ಸೋಂಕು ಪ್ರಕರಣಗಳ ಪ್ರಮಾಣ ಶೇ 17ರಷ್ಟಿದೆ ಎಂದು 'ಇಟಲಿ ರಾಷ್ಟ್ರೀಯ ಆರೋಗ್ಯ ಸಂಸ್ಥೆ-ಐಎಸ್‌ಎಸ್' ಶುಕ್ರವಾರ ತಿಳಿಸಿದೆ.

              ಈ ಎರಡರ ಪೈಕಿ ಡೆಲ್ಟಾ ತಳಿ ಪ್ರಾಬಲ್ಯ ಸಾಧಿಸುತ್ತಿದೆ ಎಂದೂ ಐಎಸ್‌ಎಸ್‌ ಹೇಳಿದೆ.

ಸಾರ್ಸ್‌ ಕೋವ್‌-2 (ಕೊರೊನಾ ವೈರಸ್‌)ನಿಂದ ರೂಪಾಂತರಗೊಂಡು ಸೃಷ್ಟಿಯಾಗಿರುವ ಡೆಲ್ಟಾ(ಬಿ16172) ಮತ್ತು ಕಪ್ಪಾ (ಬಿ16171) ಮೊದಲಿಗೆ ಪತ್ತೆಯಾಗಿದ್ದು ಭಾರತದಲ್ಲಿ. ಇದರಲ್ಲಿ ಡೆಲ್ಟಾವನ್ನು 'ಆತಂಕಕಾರಿ ತಳಿ' ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಘೋಷಿಸಿದೆ.

           ಇಟಲಿಯಲ್ಲಿ ಮೇ ತಿಂಗಳಲ್ಲಿ ಶೇ 4.2ರಷ್ಟಿದ್ದ ಡೆಲ್ಟಾ ಮತ್ತು ಕಪ್ಪಾ ಪ್ರಕರಣಗಳು ಜೂನ್‌ನಲ್ಲಿ ಶೇ 16.8ಕ್ಕೆ ಏರಿವೆ. ಜೂನ್ 21 ರಂದು ಲಭ್ಯವಾದ ದತ್ತಾಂಶ ಉಲ್ಲೇಖಿಸಿ ಐಎಸ್‌ಎಸ್‌ ಮಾಹಿತಿ ನೀಡಿದೆ.

'ಈ ಎರಡೂ ತಳಿಗಳ ಪ್ರಸರಣ ವೇಗ ಪಡೆದುಕೊಳ್ಳುತ್ತಿರುವುದು ನಮ್ಮ ಸಾಂಕ್ರಾಮಿಕ ರೋಗ ಅಧ್ಯಯನದಲ್ಲಿ ಗೊತ್ತಾಗಿದೆ. ಯೂರೋಪಿನ ಇತರ ದೇಶಗಳಂತೆಯೇ ಇಟಲಿಯಲ್ಲಿಯೂ ಡೆಲ್ಟಾ ತಳಿ ಪ್ರಾಬಲ್ಯ ಸಾಧಿಸುತ್ತಿದೆ,' ಎಂದು ಐಎಸ್‌ಎಸ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕಿ ಅನ್ನಾ ತೆರೇಸಾ ಪಲಮರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries