ತ್ರಿಶೂರ್: ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬದ ಬಗ್ಗೆ ಪದ್ಮಜಾ ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರನ್ನು ಕೂಡಲೇ ನೇಮಕ ಮಾಡಬೇಕೆಂದು ಕಾಂಗ್ರೆಸ್ಸ್ ನ ಹಿರಿಯ ನೇತಾರೆ ಪದ್ಮಜಾ ವೇಣುಗೋಪಾಲ್ ಒತ್ತಾಯಿಸಿರುವÀರು.
ಆದರೆ, ಕೆಪಿಸಿಸಿ ಅಧ್ಯಕ್ಷರ ನೇಮಕಾತಿಯನ್ನು ನಿಧಾನಗೊಳಿಸುವ ಮೂಲಕ ಮಾಧ್ಯಮಗಳಲ್ಲಿ ಗುಲ್ಲೆಬ್ಬುವಂತೆ ಮಾಡಬಾರದು. ನಿರ್ಧಾರ ಕೈಗೊಳ್ಳಲು ಯಾವಾಗಲೂ ಮೀನ-ಮೇಷ ಎಣಿಸುವ ಕಾಂಗ್ರೆಸ್ಸಿಗರೆಂಬ ಮಾತುಗಳಿಗೆ ಎಡೆಮಾಡಬಾರದು. ಯಾವ ನಿರ್ಧಾರವಾದರೂ ತಕ್ಷಣ ಕೈಗೊಂಡರೆ ಅದಕ್ಕೆ ಮಹತ್ತರವಾದ ಮೌಲ್ಯವಿದೆ. ಹೊಸ ಪ್ರತಿಪಕ್ಷದ ನಾಯಕರು ಇದೀಗ ಆಯ್ಕೆಯಾದ ಹೊತ್ತಲ್ಲಾದರೂ ಜನರ ವಿಶ್ವಾಸಕ್ಕೆ ಧಕ್ಕೆ ಬಾರದ ವರ್ತನೆ ಪಕ್ಷದ ನೇತಾರರಿಂದ ಮೂಡಿಬರಲಿ ಎಂದು ಅವರು ತಮ್ಮ ಪೇಸ್ ಬುಕ್ ಪೋಸ್ಟ್ ಜನಲ್ಲಿ ಬರೆದು ಚುರುಕುಮುಟ್ಟಿಸಲು ಯತ್ನಿಸಿದ್ದಾರೆ.