ಕೋವಿಡ್ 19 ಸಾಂಕ್ರಾಮಿಕ ವ್ಯಾಪಕವಾಗಿರುವ ಈ ಸಮಯದಲ್ಲಿ ಮಾನವೀಯತೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಕೊರೊನಾ 2ನೇ ಅಲೆ ನಮ್ಮ ದೇಶಕ್ಕೆ ದೊಡ್ಡ ಸಂಕಷ್ಟವನ್ನೇ ತಂದಿದೆ. ಕೊರೊನಾ ವಿರುದ್ಧ ಹೋರಾಡಲು ಇಡೀ ವಿಶ್ವವೇ ಒಟ್ಟಾಗಿ ಶ್ರಮಿಸುತ್ತಿದೆ. ಕೋವಿಡ್ 19ನಿಂದ ತೊಂದರೆಯಾದವರಿಗೆ ನೆರವು ನೀಡುವುದು ಮಾನವೀಯತೆ. ಈ ನಿಟ್ಟಿನಲ್ಲಿ ಡೈಲಿ ಹಂಟ್‌ನ ಜೋಷ್ ಆಯಪ್ (Josh App)ಕೂಡ ಕೋವಿಡ್ ವಾರಿಯರ್ಸ್ ಹಾಗೂ ಫ್ರಂಟ್‌ಲೈನ್ ವರ್ಕರ್ಸ್‌ಗೆ ಸಹಾಯ ಮಾಡುತ್ತಿದೆ. ಬ್ಲೂ ರಿಬ್ಬನ್ ಅಭಿಯಾನ ಪ್ರಾರಂಭಿಸಿರುವ ಜೋಷ್ #IAmABlueWarrior'ಮೂಲಕ ದೇಣಿಗೆ ಸಂಗ್ರಹಣೆಯನ್ನು ಜೂನ್ 5ರಿಂದ ಮಾಡುತ್ತಿದ್ದು ಜೂನ್ 18ರವರೆಗೆ ಈ ಅಭಿಯಾನ ಮುಂದುವರಿಯಲಿದೆ.
ಜೋಷ್‌ನ #IAmABlueWarrior ಅಭಿಯಾನದಲ್ಲಿ ರ‍್ಯಾಪರ್ ಬಾದ್‌ಷಾ, ಫೈಸು, ಸಮೀಕ್ಷಾ, ವಿಶಾಲ್, ಫಯಾಜ್, ಭವಿನ್, ಹಸನೈನ್ ಹಾಗೂ ಸಾದನ್ ಮುಂತಾದ ಪ್ರಸಿದ್ಧ ಸೋಷಿಯಲ್ ಮೀಡಿಯಾ ಪ್ರಭಾವಿಗಳು, ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಇವರೆಲ್ಲಾ ಜನರಲ್ಲಿ ಜಾಗೃತಿ ಮೂಡಿಸುವ ವೀಡಿಯೋಗಳನ್ನು ಮಾಡುವ ಮೂಲಕ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಹಾಗೂ ಫ್ರಂಟ್‌ಲೈನ್ ವರ್ಕರ್ಸ್‌ಗೆ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ವೀಡಿಯೋಗಳನ್ನು ಮಾಡಿ ಅದನ್ನು ತಮ್ಮ ಜೋಷ್ ಆಯಪ್‌ನ ಅಕೌಂಟ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಾಕುವ ಮೂಲಕ ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ಗೆ ಬ್ಲೂ ರಿಬ್ಬನ್‌ನ ಸದುದ್ದೇಶ ತಿಳಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಜೋಷ್ ಆಯಪ್ ಪ್ರಾರಂಭ ಮಾಡಿರುವ ಬ್ಲೂ ರಿಬ್ಬನ್‌ನ ಈಗಿನ ಹೊಸ ಸೆನ್ಸೇಷನ್ ಅಂದ್ರೆ 14 ಡ್ರಾನ್ಸ್ ಕ್ರಿಯೇಟರ್ಸ್/ಇನ್‌ಫ್ಲೂನ್ಸರ್‌ಗಳು (ನೃತ್ಯಗಾರರು/ಪ್ರಭಾವಿಗಳು). ಇವರು ಜೋಷ್ ಆಯಪ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋಗಳನ್ನು ಹಾಕಿ ಬ್ಲೂ ರಿಬ್ಬನ್ ಕುರಿತು ತಮ್ಮ ಅಭಿಮಾನಿಗಳಿಗೆ, ಫಾಲೋವರ್ಸ್‌ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಖುಷಿಯಿಂದ ಈ ಅಭಿಯಾನದಲ್ಲಿ ಭಾಗವಹಿಸಿರುವ ಅವರೆಲ್ಲಾ ಈ ಅಭಿಯಾನಕ್ಕೆ ತುಂಬು ಮನಸ್ಸಿನಿಂದ ಬೆಂಬಲ ನೀಡುತ್ತಿದ್ದಾರೆ.
ಈ 14 ಡ್ಯಾನ್ಸ್ ಕ್ರಿಯೇಟರ್ಸ್‌ಗಳಾದ ಮೋಹಕ್ ಮಂಗಾಹನಿ, ಖುಷ್ಬು ಸಿಂಗ್, ತರುಣ್ ಡ್ಯಾನ್ಸ್ ಸ್ಟಾರ್, ಆಕಾಂಕ್ಷಾ ವೋರಾ, ಸಿಮ್ರಾನ್, ಪ್ರಿನ್ಸ್ ಗುಪ್ತಾ, ಸೋನಲ್ ಬಹುದೊರೈ, ಇಸ್ಸ್ಹಾನ್ಯ ಎಂ, ಗ್ಯಾಂಗ್ 13 ಅಫೀಷಿಯಲ್, ಪೆರಿ ಶೀತೆಲ್, ಚೆರ್ರಿ ಬಾಂಬ್, ದೀಪಕ್ ತುಲಶ್ಯಾನ್, ಸಂಜನ ಮತ್ತು ಕಿಂಗ್ ಯುನೈಟೆಡ್ ಇವರೆಲ್ಲಾ ಜೂನ್ 13, 2021ಕ್ಕೆ ಲೈವ್ ಬರಲಿದ್ದಾರೆ. ಇದರ ಜೊತೆಗೆ ಬೋನಸ್ ಅಂದ್ರೆ ಪ್ರಸಿದ್ಧ ಸಂಗೀತ ಸಂಯೋಜಕರು-ನಿರ್ದೇಶಕರೊಬ್ಬರು ಜೂನ್ 14ಕ್ಕೆ ಜೋಷ್ ಆಯಪ್‌ನಲ್ಲಿ ಎಕ್ಸಿಕ್ಲೂಸಿವ್ ಆಗಿ ಸಂಗೀತವೊಂದನ್ನು ಬಿಡುಗಡೆ ಮಾಡಲಿದ್ದಾರೆ, ಆದ್ದರಿಂದ ಜೋಷ್ ಆಯಪ್ ಫಾಲೋ ಮಾಡಲು ಮಿಸ್ ಮಾಡದಿರಿ.
ನೀವೂ ಕೂಡ ಇಲ್ಲಿ ನೀಡಿರುವ ವಿಷಯಗಳ ಮೇಲೆ ವೀಡಿಯೋ ಮಾಡಿ #IAmABlueWarrior ಚಾಲೆಂಜ್‌ನಲ್ಲಿ ಭಾಗಿಯಾಗಬಹುದು
1. ಡಬಲ್ ಮಾಸ್ಕ್‌ನ ಅವಶ್ಯಕತೆ
2. ಲಸಿಕೆ ಬಗ್ಗೆ ಜಾಗೃತಿ
3. ಕೋವಿಡ್ 19 ಬಗ್ಗೆ ಸಂಗತಿಗಳು
4. ಸಾಮಾಜಿಕ ಅಂತರ
5. ಸ್ಯಾನಿಟೈಸ್ ಮಾಡುವುದರ ಪ್ರಾಮುಖ್ಯತೆ
6. ಕೋವಿಡ್ 19 ಶುಚಿತ್ವ
7. ಸ್ಟೇ ಹೋಂ, ಸ್ಟೇ ಸೇಫ್
8. ಆಕ್ಸಿಜನ್ ಕುರಿತು ಜಾಗೃತಿ ಕಾರ್ಯಕ್ರಮ
ವೀಡಿಯೋಗೆ #IAmABlueWarrior ಹ್ಯಾಶ್ ಟ್ಯಾಗ್ ತಪ್ಪದೆ ಬಳಸಿ
ನಿಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಯಾನದ ಸ್ಪೆಷಲ್ ಡಿಸ್‌ಪ್ಲೇ ಪಿಕ್ಚರ್ ಬಳಸಿ.
ಜೋಷ್ ಆಯಪ್‌ನ #IAmABlueWarrior ಚಾಲೆಂಜ್‌ನಲ್ಲಿ ಭಾಗಿಯಾಗಲು ಇದನ್ನು ಕ್ಲಿಕ್ ಮಾಡಿ
ಬ್ಲೂ ರಿಬ್ಬನ್ ಅಭಿಯಾನದ ಪ್ರಾರಂಭದಲ್ಲಿ ಭಾರತದ ಪ್ರಸಿದ್ಧ ಸಂಗೀತ ಸಂಯೋಜಕರಾಗಿರುವ ಕ್ಲಿಂಟನ್ ಸೆರೆಜೋ ಜೋಷ್ ಆಯಪ್‌ಗಾಗಿಯೇ #IAmABlueWarrior ಮಾಡಿರುವ ದಿಲ್ ಸೆ ಜೋಡೆನ್ ಶೀರ್ಷಿಕೆಯ ಧ್ಯೇಯ ಗೀತೆ ಮಾಡಲಾಗಿದೆ. ಈ ಹಾಡಿನ ವೀಡಿಯೋದಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳು ಭಾಗಿಯಾಗಿದ್ದು ಹಾಡು ಈಗಾಗಲೇ ಪ್ರಸಿದ್ಧವಾಗಿದೆ.
#IAmABlueWarrior ಹಿಂದಿ ಧ್ಯೇಯ ಗೀತೆ ಹಾಡು
#IAmABlueWarrior ಕನ್ನಡ ಧ್ಯೇಯ ಗೀತೆ ಹಾಡು
#IAmABlueWarrior ಮಲಯಾಳಂ ಧ್ಯೇಯ ಗೀತೆ ಹಾಡು
#IAmABlueWarrior ತೆಲುಗು ಧ್ಯೇಯ ಗೀತೆ ಹಾಡು
#IAmABlueWarrior ತಮಿಳು ಧ್ಯೇಯ ಗೀತೆ ಹಾಡು
ಈ ಅಭಿಯಾನದ ಮೂಲಕ ಜೋಷ್ ಕೊರೊನಾ ಸಾಂಕ್ರಮಿಕದಿಂದ ತೊಂದರೆಗೊಳಗಾದವರ ಸಹಾಯಕ್ಕೆ ಮುಂದಾಗಿದೆ. ಈ ಅಭಿಯಾನ ಪ್ರಾರಂಭಿಸಿದ ಒಂದು ವಾರದೊಳಗೆ 3 ಕೋಟಿಯಷ್ಟು ಹಣ ಸಂಗ್ರಹಿಸಿದೆ, ಇದು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. #IAmABlueWarrior ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸಂಗ್ರಹಣೆಯಾದ ಒಟ್ಟು ಹಣವನ್ನು ಪಿಎಂ ಕೇರ್ ( ಪ್ರಧಾನಮಂತ್ರಿ ಪರಿಹಾರ ನಿಧಿಗೆ) ನೀಡಲಾಗುವುದು.
ಈ ಅಭಿಯಾನಕ್ಕೆ ಉತ್ತಮವಾದ ಸ್ಪಂದನೆ ದೊರೆತಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ ಹಾಗೂ ಜೋಷ್ ಆಯಪ್ #IAmABlueWarrior ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಅನೇಕ ವೀಡಿಯೋಗಳು ಬಂದಿವೆ. ಇನ್ಯಾಕೆ ತಡ, ನೀವೂ ಕೂಡ ಈ ಅಭಿಯನದಲ್ಲಿ ಭಾಗವಹಿಸಿ. ಜೋಷ್ ಆಯಪ್‌ಗೆ ಇಂದೇ ಲಾಗಿನ್ ಆಗಿ ನಿಮ್ಮ ವೀಡಿಯೋ ಮೂಲಕ #IAmABlueWarrior ಚಾಲೆಂಜ್‌ನಲ್ಲಿ ಭಾಗವಹಿಸಿ ಈ ಮಾನವೀಯ ಕಾರ್ಯದಲ್ಲಿ ಭಾಗಿಯಾಗಿ.