ಕಾಸರಗೋಡು: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಕೇರಳ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಟನೆ(ಕೆಜಿಎಂಓಎ)ರಾಜ್ಯಾದ್ಯಂತ ಆಯೋಜಿಸಿದ್ದ ಪ್ರತಿಭಟನೆ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆ ಎದುರು ಶುಕ್ರವಾರ ವೈದ್ಯರು ಧರಣಿ ನಡೆಸಿದರು.
ಧರಣಿ ಅಂಗವಾಗಿ ವೈದ್ಯರು ಓ.ಪಿ ವಿಭಾಗದ ಚಟುವಟಿಕೆ ಬಹಿಷ್ಕರಿಸಿದ್ದರು. ಆಸ್ಪತ್ರೆ ಮೇಲ್ವಿಚಾರಕ ಡಾ. ರಾಜಾರಾಂ ಧರಣಿ ಉದ್ಘಾಟಿಸಿದರು. ಘಟಕ ಕನ್ವೀನರ್ ಡಾ. ಅನೂಪ್ ಅಧ್ಯಕ್ಷತೆ ವಹಿಸಿದ್ದರು. ಐಎಂಎ ಅಧ್ಯಕ್ಷ ಡಾ. ನಾರಾಯಣ ನಾಯ್ಕ್, ವೈದ್ಯರಾದ ಕುಞÂರಾಮನ್, ಕೃಷ್ಣ ನಾಯ್ಕ್, ವಸಂತಿ ಕೆ, ಶೆರಿನಾ, ಶಮೀಮಾ, ಜಮಾಲುದ್ದೀನ್ ಮುಂತಾದವರು ಪಾಲ್ಗೊಂಡಿದ್ದರು.