ಕಾಸರಗೋಡು: ಬೇಕಲ ಪ್ರವಾಸೋದ್ಯಮಕ್ಕೆ ಪುನಶ್ಚೇತನ ಲಭಿಸಿದೆ. ರೆಸಾಟ್ ಕಾಮಗಾರಿ ಪುನರಾರಂಭವಾಗಿದೆ.
ಉದುಮ ಗ್ರಾಮ ಪಂಚಾಯತ್ ನ ಮಾಲಾಂಕುನ್ನು ನಲ್ಲಿ ಬಿ.ಆರ್.ಡಿ.ಸಿ.ರೆಸಾಟ್ ಸೈಟ್ ನಲ್ಲಿ ಕಳೆದ ಅನೇಕ ವಷಗಳಿಂದ ಮೊಟಕುಗೊಂಡಿದ್ದ ತಾರಾ ಹೋಟೆಲ್ ನ ನಿಮಾಣ ಪುರಾರಂಭಿಸಲು ತೀಮಾನ ಕೈಗೊಳ್ಳಲಾಗಿದೆ. ಇದರ ಪೂವಭಾವಿಯಾಗಿ ರೆಸಾಟ್ ನಿಮಾಣಕಾರರಾದ ಗ್ಲೋಬ್ ಲಿಂಕ್ ಹೋಟೆಲ್ಸ್ ಸಂಸ್ಥೆ ಬಿ.ಆರ್.ಡಿ.ಸಿ.ಗೆ ಸಲ್ಲಿಸಬೇಕಿದ್ದ ಲೀಸ್ ಬಾಕಿ ಮೊಬಲಗು ಪೂಣರೂಪದಲ್ಲಿ ಪಾವತಿಸಿದೆ.
ಸುಮಾರು 150 ಕೊಠಡಿಗಳಿರುವ ಈ ತಾರಾ ಹೋಟೆಲ್ ಸಮುಚ್ಚಯದಲ್ಲಿ ಸಭಾಂಗಣ, ಸ್ಪಾ ಇತ್ಯಾದಿ ಇರುವುದು. ಬೇಕಲ ಬೀಚ್ ವತಿಯಿಂದ ಕಂಪನಿಗೆ ನೀಡಿರುವ 3 ಎಕ್ರೆ ಜಾಗದಲ್ಲಿ ರೆಸಾಟ್ ಗೆ ಆಗಮಿಸುವ ಮಂದಿಗಾಗಿ ನದಿಯ ಮೂಲಕ ಬೋಟ್ ನಲ್ಲಿ ಸಮುದ್ರದ ಸೌಂದಯ ವೀಕ್ಷಣೆಗೂ ಸೌಲಭ್ಯವಿರುವುದು.
ಕಳೆದ ಸರಕಾರದ ಅವಧಿಯಲ್ಲಿ ಬಿ.ಆರ್.ಡಿ.ಸಿ.ಯ ಆಡಳಿತ ನಿದೇಶಕರ ಹೊಣೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ವಹಿಸಿದ ಮೇಲೆ ಬಿ.ಆರ್.ಡಿ.ಸಿ.ಯಿಂದ ಲೀಸ್ ಗೆ ಪಡೆದ ಮಾಲಾಂಕುನ್ನು ನ ಗ್ಲೋಬ್ ಲಿಂಕ್, ಚೇಟ್ಟುಕುಂಡಿನ ಏರ್ ಟ್ರಾವೆಲ್ಸ್ ಎಂಟರ್ ಪ್ರೈಸಸ್, ಚೆಂಬರಿಕ್ಕದ ಹಾಲಿಡೇ ಗ್ರೂಪ್ ಎಂಬ ಕಂಪನಿಗಳು ವಹಿಸಿಕೊಂಡಿರುವ ರೆಸಾಟ್ ಗಳ ಕಾಮಗಾರಿ ಮೊಟಕುಗೊಂಡಿದ್ದುದು, ಇದೀಗ ಪುನಶ್ಚೇತನಗೊಂಡಿದೆ.
1992ರಲ್ಲಿ ಕೇಂದ್ರ ಸರಕಾರ ಬೇಕಲವನ್ನು ಬೀಚ್ ಡೆಸ್ಟಿನೇಷನ್ ಆಗಿ ಪರಿವತಿಸುವ ನಿಟ್ಟಿನಲ್ಲಿ ಪ್ರತ್ಯೇಕ ಪ್ರವಾಸೋದ್ಯಮ ವಲಯ ಎಂದು ಘೋಷಿಸಿತ್ತು. ಈ ಮೂಲಕ ಬೇಕಲ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಬೇಕಲದಲ್ಲಿ ಪ್ರವಾಸೋದ್ಯಮ ಮೂಲಭೂತ ಸೌಲಭ್ಯ ಒದಗಿಸಲು ಜಾಗತಿಕ ಮಟ್ಟದ ವಸತಿ ಸೌಲಭ್ಯ ಒದಗಿಸಲು 1995ರಲ್ಲಿ ರಾಜ್ಯ ಸರಕಾರ ಬೇಕಲ ರೆಸಾಟ್ ಡೆವೆಲಪ್ ಮೆಂಟ್ ಕಾಪರೇಷನ್ ( ಬಿ.ಆರ್.ಟಿ.ಸಿ.) ರಚಿಸಲಾಗಿತ್ತು. 235 ಎಕ್ರೆ ಜಾಗವನ್ನು ವಹಿಸಿಕೊಂಡು ತಲಾ 40 ಎಕ್ರೆ ಜಾಗವನ್ನು ಪಳ್ಳಿಕ್ಕರೆ, ಚೆಮ್ನಾಡು, ಉದುಮಾ, ಅಜಾನೂರು ಎಂಬ 4 ಗ್ರಾಮ ಪಂಚಾಯತ್ ಗಳಲ್ಲಿ 6 ಕಂಪನಿಗಳಿಗೆ ಲೀಸ್ ಗೆ ನೀಡಲಾಗಿತ್ತು. ರೆಸಾಟ್ ಗಳ ಸಹಿತ ವಿವಿಧ ವಿಚಾರಗಳಿಗೆ ಸರಕಾರ ಪ್ರವಾಸೋದ್ಯಮ ನಿಟ್ಟಿನಲ್ಲಿ ರಸ್ತೆಗಳನ್ನೂ ನಿಮಿಸಿತ್ತು. ಜೊತೆಗೆ 4 ಗ್ರಾಮ ಪಂಚಾಯತ್ ಗಳ ಜನತೆಗೆ ಮತ್ತು ರೆಸಾಟ್ ಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ನಡೆಸಿರುವ 7 ಎಂ.ಎಲ್.ಡಿ. ವಾಟರ್ ಪ್ರಾಜೆಕ್ಟ್ ಈ ವ್ಯವಸ್ಥಿತ ಪ್ರವಾಸೋದ್ಯಮದ ಕೊಡುಗೆಯಾಗಿತ್ತು. ಅಜಾನೂರು ಪಂಚಾಯತ್ ನ ಕೋಳವಯಲ್ ರೆಸಾಟ್ ಯೋಜನೆ ಮಾತ್ರ ಕರಾವಳಿ ಕಾನೂನು ಕಾರಣ ವಹಿಸಿಕೊಂಡಿದ್ದ ವ್ಯಕ್ತಿ ಕೈಬಿಟ್ಟಿದ್ದರು.
ಮಾಲಾಂಕುನ್ನಿನ ರೆಸಾಟ್ ಯೋಜನೆ ಪುನರಾರಂಭಿಸುವ ಮೂಲಕ ಇತರ ರೆಸಾಟ್ ವಹಿಸಿಕೊಮಡಿರುವ ಕಂಪನಿಗಳು ಕಾಮಗಾರಿ ಪುನರಾರಂಭಿಸುವ ಸಜ್ಜೀಕರಣದಲ್ಲಿರುವ ನಿರೀಕ್ಷೆಗಳಿವೆ ಎಂದು ಬಿ.ಆರ್.ಡಿ.ಸಿ. ಆಡಳಿತೆ ನಿದೇಶಕರಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಮೊಟಕುಗೊಂಡಿರುವ ಕಾಮಗಾರಿಗಳು ಪೂಣಗೊಂಡರೆ ತಾಜ್, ಲಲಿತ್ ಸಹಿತ ರೆಸಾಟ್ ಗಳ ಮೂಲಕ ಲಭಿಸಿರುವಂತೆ ಬಿ.ಆರ್.ಡಿ.ಸಿ.ಗೆ ಲೀಸ್ ಮೊಲಬಗು ಮೊಟಕಿಲ್ಲದೆ ಲಭ್ಯತೆ ಆರಂಭಗೊಳ್ಳುವುದು. ಗ್ರಾಮ ಪಂಚಾಯತ್ ಗಳಿಗೆ ತೆರಿಗೆ ರೂಪದಲ್ಲಿ, ಕೇಂದ್ರ-ರಾಜ್ಯ ಸರಕಾರಗಳಿಗೆ ಜಿ.ಎಸ್.ಟಿ. ಸಹಿತ ಕೋಟಿಗಟ್ಟಲೆ ರೂ. ವಿವಿಧ ತೆರಿಗೆ ರೂಪದಲ್ಲಿ ಲಭಿಸಲಿದೆ.
ಎಲ್ಲ ರೆಸಾಟ್ ಗಳೂ ಚುಟವಟಿಕೆ ಆರಂಭಿಸಿದರೆ 600 ತಾರಾ ಹೊಟೆಲ್ ಕೊಠಡಿಗಳು ಕಾಸರಗೋಡು ಜಿಲ್ಲೆಯಲ್ಲಿ ಸಜ್ಜುಗೊಳ್ಳಲಿವೆ. ಇದು ಡೆಸ್ಟಿನೇಷನ್ ವೆಡ್ಡಿಂಗ್ ಗಳ ಮತ್ತು ಎಂ.ಐ.ಸಿ.ಇ.(ಮಿಟಿಂಗ್ಸ್ ಇನ್ ಸೆಂಟಿವ್ಸ್ ಕಾನ್ ಫೆರೆನ್ಸ್ ಆಂಡ್ ಎಕ್ಸಿಬಿಷನ್ಸ್) ಪ್ರವಾಸೋದ್ಯಮದ ಕೇಂದ್ರವಾಗಿ ಬೇಕಲ ಮಾಪಡಲಿದೆ. ಬೇಕಲ ಪ್ರವಾಸೋದ್ಯಮ ಯೋಜನೆ ಪೂಣಗೊಂಡಲ್ಲಿ ಕನಿಷ್ಠ ಒಂದು ಲಕ್ಷ ಮಂದಿಗೆ ಪ್ರತ್ಯಕ್ಷ-ಪರೋಕ್ಷ ನೌಕರಿ ಲಭಿಸುವ ನಿರೀಕ್ಷೆಯಿದೆ ಎಂದವರು ನುಡಿದರು.