ಕೋಝಿಕ್ಕೋಡ್: ತೊಂದರೆಗೀಡಾದ ಮಹಿಳೆ ಸಂಕಷ್ಟ ತೋಡಿಕೊಳ್ಳಲು ಪೋನ್ ಮೂಲಕ ಸಂಪರ್ಕಿಸಿದಾಗ ಅಸಭ್ಯವಾಗಿ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಜೋಸೆಫೀನ್ ಅವರನ್ನು ತೆಗೆದುಹಾಕುವಂತೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ಒತ್ತಾಯಿಸಿದ್ದಾರೆ. ಮಹಿಳೆಯರಿಗೆ ಅಗತ್ಯವಿಲ್ಲದ ಮಹಿಳಾ ಆಯೋಗವನ್ನು ಸರ್ಕಾರ ಏಕೆ ನಿರ್ವಹಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಕೌಟುಂಬಿಕ ಹಿಂಸಾಚಾರಕ್ಕಿಂತ ಮಹಿಳಾ ಆಯೋಗದ ಅಧ್ಯಕ್ಷರಿಂದ ಮಹಿಳೆಯರು ಹೆಚ್ಚಿನ ಮಾನಸಿಕ ಕಿರುಕುಳವನ್ನು ಎದುರಿಸುತ್ತಾರೆ. ಕೇರಳದ ಮಹಿಳೆಯರು ಇಂತಹ ಅಧಿಕಾರಿಗೆ ಹೇಗೆ ದೂರು ನೀಡಬಹುದು ಎಂದು ಸುರೇಂದ್ರನ್ ಕೇಳಿರುವರು.
ಅವರ ವಿರುದ್ಧ ಪ್ರಕರಣ ದಾಖಲಿಸಲು ಗೃಹ ಇಲಾಖೆ ಮುಂದಾಗಬೇಕು. ಮಹಿಳಾ ಆಯೋಗದ ಅಧ್ಯಕ್ಷೆ ರಾಜ್ಯದ ಆಡಳಿತ ನಡೆಸುವ ಪಕ್ಷದ ವ್ಯವಸ್ಥೆಯ ಪರವಾಗಿದ್ದೇನೆ ಮತ್ತು ದೇಶದ ಸಂವಿಧಾನಕ್ಕಲ್ಲ ಎಂದು ಹೇಳುತ್ತಾರೆ. ಅವರನ್ನು ಅವಮಾನಿಸಿದರೆ ಆಕೆ ಪಕ್ಷಕ್ಕೆ ದೂರು ನೀಡುತ್ತೇನೆ ಎಂದು ಬೆದರಿಸಲಾಗಿದೆ. ದುರಹಂಕಾರ ಮತ್ತು ಅಸಮರ್ಥತೆಯಿಂದ ಅಲಂಕರಿಸಲ್ಪಟ್ಟ ಜೋಸೆಫೀನ್ ಅವರಂತಹ ಯಾರಾದರೂ ಮಹಿಳಾ ಆಯೋಗದ ಅಧ್ಯಕ್ಷತೆಯನ್ನು ವಹಿಸುತ್ತಿರುವುದು ರಾಜ್ಯದಾದ್ಯಂತದ ಮಹಿಳೆಯರಿಗೆ ನಾಚಿಕೆಗೇಡಿನ ಸಂಗತಿ. ಶಬರಿಮಲೆಯ ಪರಂಪರೆಯನ್ನು ಮುರಿದು ನವ ಕೇರಳ ಕಟ್ಟಲು ಹೊರಟವರು ಮೊದಲು ಮಹಿಳೆಯರು ಕೇರಳದಲ್ಲಿ ಸಂತಸವಾಗಿ ವಾಸಿಸಲು ಪರಿಸ್ಥಿತಿಗಳನ್ನು ಸೃಷ್ಟಿಸಬೇಕು ಎಂದು ಸುರೇಂದ್ರನ್ ಒತ್ತಾಯಿಸಿರುವರು.