ಕಾಸರಗೋಡು: ಸ್ವಚ್ಛ್ ಭಾರತ್ ಮಿಷನ್ ಕಿರುಚಿತ್ರ ಸ್ಪರ್ಧೆ ನಡೆಸಲಾಗುವುದು.
ಕೇಂದ್ರ ಜಲಶಕ್ತಿ ಮಂತ್ರಾಲಯ ವ್ಯಾಪ್ತಿಯಲ್ಲಿ ಡ್ರಿಂಕಿಂಗ್ ವಾಟರ್ ಆಂಡ್ ಸಾನಿಟೇಷನ್ ಇಲಾಖೆ ವತಿಯಿಂದ ಸ್ವಚ್ಛ್ ಭಾರತ್ ಮಿಷನ್ (ಗ್ರಾಮೀಣ್) ದ್ವಿತೀಯಹಂತದ ಯೋಜನೆಯ ಅಂಗವಾಗಿ ರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆ ಜರುಗಲಿದೆ.
ಸ್ವಚ್ಛ್ ಭಾರತ್ ಮಿಷನ್ (ಗ್ರಾಮೀಣ್) ದ್ವಿತೀಯಹಂತದಲ್ಲಿ ನಮ್ಮ ದೇಶದ ಗ್ರಾಮಗಳ ಶುಚಿತ್ವದ ಗುಣಮಟ್ಟ ನಿಗದಿ ಮಾಡುವಲ್ಲಿ ಒ.ಡಿ.ಎಫ್. ಪ್ಲಸ್ ವಿಭಾಗಕ್ಕೆ ಬಡ್ತಿಗೊಂಡಿರುವ ಸಾಧನೆಗಳಿಗೆ ಕೈಗನ್ನಡಿಯಾಗುವ ನಿಟ್ಟಿನಲ್ಲಿ ಈ ಸ್ಪರ್ಧೆ ನಡೆಸಲಾಗುತ್ತಿದೆ. 10 ವರ್ಷಕ್ಕಿಂತ ಅಧಿಕ ವಯೋಮಾನದ ಭಾರತೀಯ ಪ್ರಜೆ , ಗ್ರಾಮೀಣ ವಲಯಗಳಲ್ಲಿ ಚಟುವಟಿಕೆ ನಡೆಸುತ್ತಿರುವ ಸಂಸ್ಥೆಗಳು, ಎನ್.ಜಿ.ಒ.ಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಒಂದು ನಿಮಿಷದಿಂದ 5 ನಿಮಿಷದ ನಡುವಿನ ಅವಧಿಯಲ್ಲಿ ಶಾರ್ಟ್ ಫಿಲಂ ಗಳನ್ನು ಸ್ಪರ್ಧೆಯಲ್ಲಿ ಪರಿಶೀಲಿಸಲಾಗುವುದು. ಭಾರತೀಯ ಯಾವುದೇ ಭಾಷೆಗಳಲ್ಲೂ ಕಿರುಚಿತ್ರ ನಿರ್ಮಿಸಬಹುದು. ಸುಮಾರು 35 ಲಕ್ಷ ರೂ.ನ ನಗದು ಬಹುಮಾನ ವಿವಿಧ ವಿಭಾಗಗಳ ಸ್ಪರ್ಧಾ ವಿಜೇತರಿಗೆ ಲಭಿಸಲಿದೆ.
ಎರಡು ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿವೆ. ಮೊದಲನೆಯದರಲ್ಲಿ ವಿಷಯ ಒ.ಡಿ.ಎಫ್. ಪ್ಲಸ್ ನ 6 ಅಂಶಗಳಾದ ಜೈವಿಕ ತ್ಯಾಜ್ಯ ವಿಲೇವಾರಿ, ಗೋವರ್ಧನೆ, ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆ, ಗ್ರೇ ವಾಟರ್ ಪರಿಪಾಲನೆ, ಶೌಚಾಲಯ ತ್ಯಾಜ್ಯ ವಿಲೇವಾರಿ, ಶುಚಿತ್ವ ವ್ಯವಹಾರದಲ್ಲಿ ನಡೆದಿರುವ ಬದಲಾವಣೆ ಆಗಿದ್ದು, ಚಿತ್ರೀಕರಿಸಬೇಕಿದೆ.
ದ್ವಿತೀಯ ವಿಭಾಗದ ಕಿರುಚಿತ್ರಗಳು ಸಮಗ್ರ ಸ್ವಚ್ಛತಾ(ಶುಚಿತ್ವ) ಸಂದೇಶ ಸಾರಬೇಕು. 5 ವಿಧದ ಭೂ ಪ್ರಕೃತಿಯ ಪ್ರದೇಶಗಳಲ್ಲಿ-ಮರುಭೂಮಿ, ಮಲೆನಾಡು, ಕರಾವಳಿ, ಸಮತಟ್ಟು, ನೆರೆ ಹಾವಳಿ ಸಾಧ್ಯತೆಯ ತಾಣಗಳು ಇತ್ಯಾದಿಗಳನ್ನು ವಿಂಗಡಿಸಿ ಗ್ರಾಮ ಪ್ರದೇಶಗಳಲ್ಲಿ ಘನ ಯಾ ದ್ರವ ತ್ಯಾಜ್ಯ ನಿವಾರಣೆಯ ನೂತನ ಪರಿಹಾರ ತಿಳಿಸಬೇಕು.
ಆಸಕ್ತರು ತಮ್ಮ ವೀಡಿಯೋಗಳನ್ನು ಯೂಟ್ಯೂಬ್ ಚಾನೆಲ್ ಗೆ ಅಪ್ ಲೋಡ್ ನಡೆಸಿರುವ ಲಿಂಕನ್ನು www.mygov.in ಎಂಬ ಪೆÇೀರ್ಟಲ್ ನಲ್ಲಿ ಲಭ್ಯವಿರುವ https://innovativeindia.mygov.