ಕಾಸರಗೋಡು: ಹಾಸುಗೆ ಹಿಡಿದಿರುವ ಪಾಲಿಯೇಟಿವ್ ರೋಗಿಗಳಾದ ಅಷ್ಟೂ ಮಂದಿಗೆ ಕೋವಿಡ್ ಪ್ರತಿರೋಧ ಲಸಿಕೆ ನೀಡಿಕೆ ಪೂರ್ಣಗೊಳಿಸುವ ಮೂಲಕ ಬೆಳ್ಳೂರು ಗ್ರಾಮ ಪಂಚಾಯತ್ ಗಮನ ಸೆಳೆದಿದೆ.
ರಾಜ್ಯದಲ್ಲಿ ಹಾಸುಗೆ ಹಿಡಿದಿರುವ ಎಲ್ಲ ರೋಗಿಗಳಿಗೆ ವಾಕ್ಸಿನ್ ನೀಡಬೇಕು ಎಂದು ಕೇರಳ ಸರಕಾರ ಆದೇಶ ನೀಡಿತ್ತು. ಇದನ್ನು ಪಾಲಿಸುವ ಮೂಲಕ ಬೆಳ್ಳೂರು ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಕಾರ್ಯಕರ್ತರು ಇತರರಿಗೆ ಮಾದರಿಯಾಗಿದ್ದಾರೆ.
ಮಾ.23ರಂದು ಈ ದೌತ್ಯ ಆರಂಭಗೊಂಡಿತ್ತು. ನಂತರ ಸತತ 8 ದಿನಗಳ ಯತ್ನದ ಫಲವಾಗಿ ಮೇ 18ರಂದು ಹಾಸುಗೆ ಹಿಡಿದಿರುವ ಎಲ್ಲ ರೋಗಿಗಳಿಗೆ ಲಸಿಕೆ ನೀಡಲಾಗಿತ್ತು. ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ., ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಜಯಕುಮಾರ್, ವಾರ್ಡ್ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಈ ನಿಟ್ಟಿನಲ್ಲಿ ಶ್ರಮಿಸಿದ್ದರು.
ಇಲ್ಲಿನ 13 ವಾರ್ಡ್ ಗಳಲ್ಲಿ 114 ಮಂದಿ ಹಾಸುಗೆ ಹಿಡಿದಿರುವ ರೋಗಿಗಳು ಮೊದಲ ಡೋಸ್, 35 ಮಂದಿ ದ್ವಿತೀಯ ಡೋಸ್ ಪಡೆದರು. ವೈದ್ಯಾಧಿಕಾರಿ, ಪಾಲಿಯೇಟಿವ್ ದಾದಿಯರು, ಕಿರಿಯ ಸಾರ್ವಜನಿಕ ದಾದಿಯರು, ಮಿಡ್ ಲೈನ್ ಸರ್ವೀಸ್ ಪೆÇ್ರವೈಡರ್, ಆಶಾ ಕಾರ್ಯಕರ್ತರು ಸೇರಿರುವ ತಂಡ ಎಮರ್ಜೆನ್ಸ್ ಔಷದ ಗಳ ಸಹಿತ ಮನೆಗಳಿಗೆ ತಲಪಿ ಪ್ರತಿರೋಧ ಲಸಿಕೆ ನೀಡಿದ್ದಾರೆ.