ತಿರುವನಂತಪುರ; ಎಸ್.ಬಿ.ಐ. ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದನ್ನು ಸ್ಥಗಿತಗೊಳಿಸಲಿದೆ ಎಮದು ತಿಳಿದುಬಂದಿದೆ. ಹಲವಾರು ವಂಚನಾ ಪ್ರಕರಣಗಳ ದೂರಿನ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಯಿತು ಎಂದು ಅಧಿಕೃತರು ತಿಳಿಸಿದ್ದಾರೆ. ವಂಚನೆಯ ಕಾರಣ ಮತ್ತು ವ್ಯಕ್ತಿಗಳನ್ನು ಪತ್ತೆಹಚ್ಚಲು ಬ್ಯಾಂಕ್ ಪ್ರಯತ್ನವನ್ನು ಪ್ರಾರಂಭಿಸಿದೆ.
ರಾಜ್ಯದ ಹಲವಾರು ಎಟಿಎಂಗಳಲ್ಲಿ ಸ್ವಯಂಚಾಲಿತ ಠೇವಣಿ ಮತ್ತು ಹಿಂತೆಗೆದುಕೊಳ್ಳುವ ಯಂತ್ರವನ್ನು ಸ್ಥಾಪಿಸಲಾಗಿದೆ. ಈಗ ಇದರ ಹಿಂದೆ ವಂಚನೆಗಳು ನಡೆಯುತ್ತಿರುವುದಾಗಿ ದೂರುಗಳು ಲಭಿಸಿವೆ. ಮೂಲವನ್ನು ಗುರುತಿಸುವವರೆಗೆ ಮತ್ತು ಸಮಸ್ಯೆಯನ್ನು ಪರಿಹರಿಸುವವರೆಗೆ ಎಡಿಡಬ್ಲ್ಯೂಎಂ ಯಂತ್ರಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ ಠೇವಣಿ ಇರಿಸಲು ಯಾವುದೇ ಅಡ್ಡಿಯಿಲ್ಲ ಎಂದು ಬ್ಯಾಂಕ್ ಹೇಳಿದೆ.