ತಿರುವನಂತಪುರ: ಕಾಂಗ್ರೆಸ್ ಪಕ್ಷದೊಳಗೆ ಇನ್ನು ಗುಂಪುಗಳು ಇರಬಾರದು ಎಂದು ನೂತನವಾಗಿ ನೇಮಕಗೊಂಡ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಪರ್ಮಾನು ಹೊರಡಿಸಿದ್ದಾರೆ. ಪಕ್ಷದೊಳಗೆ ಗುಂಪಗಾರಿಕೆ ಕೊನೆಗೊಳಿಸುವುದು ಉದ್ದೇಶವಾಗಿದೆ ಮತ್ತು ಅದಕ್ಕಾಗಿ ಅವರು ಗುಂಪಿನ ಎಲ್ಲ ಮುಖಂಡರೊಂದಿಗೆ ಚರ್ಚಿಸಿರುವುದಾಗಿ ಸುಧಾಕರನ್ ಮಾಹಿತಿ ನೀಡಿರುವರು. ಜೂನ್ 16 ರಂದು ಹೊಸ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ ಸುಧಾಕರನ್ ಈ ಪ್ರತಿಕ್ರಿಯೆ ನೀಡಿಧದಾರೆ.
ಪರಿಸ್ಥಿತಿ ಗಂಭೀರವಾದುದು, ಕಾಂಗ್ರೆಸ್ ಜನರಿಂದ ದೂರವಾಗಿದೆ. ಅದನ್ನು ಪರಿಹರಿಸಲು ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪಕ್ಷವನ್ನು ಅರೆ ಕೇಡರ್ ವ್ಯವಸ್ಥೆಯನ್ನಾಗಿ ಮಾಡಲು ಮಾತುಕತೆ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿನ ಗುಂಪುಗಳನ್ನು ಕೊನೆಗೊಳಿಸುವುದು ಮುಖ್ಯ ಉದ್ದೇಶವಾಗಿದೆ ಮತ್ತು ಈ ಗುಂಪುಗಳು ಇನ್ನು ಮುಂದೆ ಪಕ್ಷದೊಳಗೆ ಇರುವುದಿಲ್ಲ ಎಂದು ಕೆ ಸುಧಕರನ್ ಹೇಳಿರುವರು. ಪಕ್ಷದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಗುಂಪು ಅಗತ್ಯವಿಲ್ಲ. ಪಕ್ಷದೊಳಗೆ ಯಾವುದಾದರೂ ವಿರೋಧವಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರನ್ ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದೊಳಗಿನ ಗುಂಪುಗಾರಿಕೆ ಸೋಲಿಗೆ ಕಾರಣ ಎಂದು ಪಕ್ಷದ ಮುಖಂಡರು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆ ಬಳಿಕ ನಾಯಕತ್ವದ ಬದಲಾವಣೆಯ ಬಗ್ಗೆ ವ್ಯಾಪಕ ಬೇಡಿಕೆ ವ್ಯಕ್ತಗೊಂಡಿತು. ಈ ಮಧ್ಯೆ ಅನಿರೀಕ್ಷಿತ ಉಪಕ್ರಮವೊಂದರಲ್ಲಿ ವಿ.ಡಿ. ಸತೀಶನ್ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರೂ ಕಾಂಗ್ರೆಸ್ ನೊಳಗೆ ಸಂಪೂರ್ಣ ಒಪ್ಪಿಗೆ ಇರಲಿಲ್ಲ ಎಂಬ ವರದಿಗಳು ಕೇಳಿ ಬಂದವು.