ನವದೆಹಲಿ/ಹೈದರಾಬಾದ್: ಕೊರೋನಾ ಎರಡನೇ ಅಲೆಯ ಗಂಭೀರ ಪರಿಣಾಮದ ಮಧ್ಯೆ ಮುಂದಿನ ಹಂತದಲ್ಲಿ ಮಕ್ಕಳಲ್ಲಿ ಸೋಂಕು ಕಂಡುಬರಬದಹುದು ಎಂಬ ಆತಂಕದ ಮಧ್ಯೆ ಕೇಂದ್ರ ಸರ್ಕಾರ ನಿನ್ನೆ ಮಕ್ಕಳಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದು, ಮಕ್ಕಳಲ್ಲಿ ಕೊರೋನಾ ಸೋಂಕು ಕಂಡುಬಂದರೆ ಆಸ್ಪತ್ರೆಗಳು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಂಡು ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
ಆದರೆ ನೀತಿ ಆಯೋಗದ ಆರೋಗ್ಯ ಇಲಾಖೆ ಸದಸ್ಯ, ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ಸ್ವತಃ ಮಕ್ಕಳ ತಜ್ಞರಾಗಿರುವ ಡಾ ವಿ ಕೆ ಪೌಲ್, ಇದುವರೆಗೆ ಶೇಕಡಾ 2ರಿಂದ 3ರಷ್ಟು ಮಕ್ಕಳಲ್ಲಿ ಮಾತ್ರ ಕೊರೋನಾ ಸೋಂಕು ಕಂಡುಬಂದಿದೆ. ಈಗಿರುವ ವೈಜ್ಞಾನಿಕ ಸಾಕ್ಷಿಗಳ ಪ್ರಕಾರ ಕೊರೋನಾ ಸೋಂಕಿಗೆ ಒಳಗಾಗುವ ಮಕ್ಕಳ ಸಂಖ್ಯೆ ಕಡಿಮೆಯಿರುತ್ತದೆ ಎನ್ನುತ್ತಾರೆ.
ವಾಸ್ತವ ಪರಿಸ್ಥಿತಿ ಏನೇ ಇದ್ದರೂ ಸರ್ಕಾರ ಯಾವುದೇ ಅನಿವಾರ್ಯತೆಗೆ ಸಿದ್ಧವಾಗಿದೆ. "ನಾವು ಅಗತ್ಯವಿರುವಂತೆ ನಮ್ಮ ಸೌಲಭ್ಯಗಳನ್ನು ಬಲಪಡಿಸುತ್ತೇವೆ ಮತ್ತು ಅಗತ್ಯವಿರುವ ಮತ್ತು ಕೆಟ್ಟ ಪರಿಸ್ಥಿತಿಯಲ್ಲಿ ಏನು ಬೇಕಾಗಬಹುದು ಎಂಬುದರ ಲೆಕ್ಕಪರಿಶೋಧನೆಯನ್ನು ಮಾಡುತ್ತೇವೆ ಎಂದು ವಿ ಕೆ ಪೌಲ್ ಹೇಳಿದ್ದಾರೆ.
ಕೋವಿಡ್-19 ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಮೂರನೇ ಅಲೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ವಿ.ಕೆ. ಪಾಲ್ ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ತಜ್ಞ ಚಂದ್ರಕಾಂತ್ ಲಹರಿಯಾ ಅವರ ಪ್ರಕಾರ, ಶೂನ್ಯ ಸಮೀಕ್ಷೆಯಿಂದ ಎಲ್ಲಾ ವಯಸ್ಸಿನ ಜನರಲ್ಲಿ ಸೋಂಕಿನ ಹರಡುವಿಕೆಯನ್ನು ಹೋಲುತ್ತದೆ ಎಂದು ತೋರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ.
ಈ ಕೊರೋನಾ ಸಂದರ್ಭದಲ್ಲಿ ಕೆಲವು ವೈದ್ಯರು ಫ್ಲೂ ಲಸಿಕೆಗಳು ಮಕ್ಕಳನ್ನು ರಕ್ಷಿಸಬಹುದು ಎನ್ನುತ್ತಾರೆ, ಆದರೆ ದೆಹಲಿಯ ಏಮ್ಸ್ ನ ಹಿರಿಯ ಮಕ್ಕಳ ತಜ್ಞರು ಇದು ಭಾರತಕ್ಕೆ ಸರಿಹೊಂದಲಿಕ್ಕಿಲ್ಲ ಎನ್ನುತ್ತಾರೆ. ಯುರೋಪ್ ರಾಷ್ಟ್ರಗಳಲ್ಲಿ ವೈರಸ್ ಸೋಂಕಿನ ವಿರುದ್ಧ ಮಕ್ಕಳಿಗೆ ಈ ರೀತಿ ಫ್ಲೂ ಲಸಿಕೆ ನೀಡಲಾಗುತ್ತದೆ ಎಂದು ಅವರು ಹೇಳುತ್ತಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಜಗದೀಶ್ ಚಿನ್ನಪ್ಪ ಕೂಡ ಇದೇ ರೀತಿ ಹೇಳುತ್ತಾರೆ. ಫ್ಲೂ ಲಸಿಕೆ ಮಕ್ಕಳನ್ನು ಅಪಾಯಕಾರಿ ಕೊರೋನಾ ಸೋಂಕಿನಿಂದ ರಕ್ಷಿಸಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮಕ್ಕಳಲ್ಲಿ ಕಫ, ಶೀತ, ಜ್ವರ ಬಂದರೆ ಅದು ಕೋವಿಡ್ ಸೋಂಕು ಅಥವಾ ಇತರ ಸಾಂಕ್ರಾಮಿಕ ರೋಗವೇ ಎಂಬ ಗೊಂದಲವನ್ನು ಬಗೆಹರಿಸಬಹುದು ಎನ್ನುತ್ತಾರೆ.
ಕೋವಿಡ್ ಪರೀಕ್ಷೆಯ ಅಗತ್ಯವನ್ನು ಕಡಿಮೆ ಮಾಡಲು, ಆರೋಗ್ಯ ವ್ಯವಸ್ಥೆಯ ಮೇಲಿನ ಹೊರೆ ಕಡಿಮೆ ಮಾಡಲು ಮತ್ತು ಮಕ್ಕಳನ್ನು ಸೋಂಕಿನಿಂದ ರಕ್ಷಿಸಲು ಮಾತ್ರ ಮಕ್ಕಳಿಗೆ ಲಸಿಕೆ ಹಾಕಿಸಲು ಭಾರತೀಯ ಮಕ್ಕಳ ಸೊಸೈಟಿ ಶಿಫಾರಸು ಮಾಡಿದೆಯೇ ಹೊರತು ಕೋವಿಡ್ -19 ತಡೆಗಟ್ಟುವ ಕಾರಣಕ್ಕೆ ಅಲ್ಲ. ಅವು ಎರಡು ವಿಭಿನ್ನ ಲಸಿಕೆಗಳು ಎಂದು ಡಾ ಜಗದೀಶ್ ಚಿನ್ನಪ್ಪ ಹೇಳುತ್ತಾರೆ.
ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಬಗ್ಗೆ ಅಧ್ಯಯನಗಳೂ ಪ್ರಕಟವಾಗಿವೆ, ಆದರೆ ಅದು ಸಾಮೂಹಿಕ ಪ್ರಮಾಣದಲ್ಲಿ ಸಾಬೀತಾಗಿಲ್ಲ. "ದೇಶವು ನಿರ್ದಿಷ್ಟ ಲಸಿಕೆಗಾಗಿ ಕಾಯಬೇಕಾಗಿದೆ ಎನ್ನುತ್ತಾರೆ ಡಾ ಜಗದೀಶ್.
ಎರಡೂ ವಿಭಿನ್ನ ವೈರಸ್, ಮಕ್ಕಳಲ್ಲಿ ಲಸಿಕೆ ಹಾಕುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು ಎಂದು ಹೇಳಬಹುದಷ್ಟೆ ಎನ್ನುತ್ತಾರೆ ಖ್ಯಾತ ಮಕ್ಕಳ ತಜ್ಞೆ ಡಾ ಆಶಾ ಬೆನಕಪ್ಪ.
ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿದೆ ಮಕ್ಕಳಲ್ಲಿ ಕೋವಿಡ್-19: ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಸುಮಾರು 9,416 ಪಾಸಿಟಿವ್ ಪ್ರಕರಣಗಳಿದ್ದು ಕೇವಲ ಅಹ್ಮದ್ ನಗರವೊಂದರಲ್ಲಿಯೇ ವರದಿಯಾಗಿದೆ.
ಏಪ್ರಿಲ್ ತಿಂಗಳಲ್ಲಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 757 ಸಕಾರಾತ್ಮಕ ಪ್ರಕರಣಗಳು ವರದಿಯಾಗಿದ್ದರೆ, 5-10 ವರ್ಷ ವಯಸ್ಸಿನ ಮಕ್ಕಳಲ್ಲಿ 1,510 ಸೋಂಕುಗಳು ಮತ್ತು 11-18 ವರ್ಷ ವಯಸ್ಸಿನವರಲ್ಲಿ 5,340 ಪ್ರಕರಣಗಳು ವರದಿಯಾಗಿವೆ. ಮಾರ್ಚ್ ತಿಂಗಳಲ್ಲಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 188 ಮಕ್ಕಳು ಸೋಂಕಿಗೆ ಒಳಗಾಗಿದ್ದರು. ಈ ಸಂಖ್ಯೆ 6-10 ವರ್ಷ ವಯಸ್ಸಿನವರಲ್ಲಿ 270 ರಷ್ಟಿದೆ ಮತ್ತು 11-18 ವರ್ಷದವರಲ್ಲಿ 1,173 ರಷ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.