ಆಲಪ್ಪುಳ: ಆಲಪ್ಪುಳದಲ್ಲಿ ಗುಳ್ಳೆ ಜೀರುಂಡೆ ದಾಳಿ ವ್ಯಾಪಕಗೊಂಡಿರುವುದಾಗಿ ತಿಳಿದುಬಂದಿದೆ. ಆಲಪ್ಪುಳದಲ್ಲಿರುವ ಇಂದಿರಾ ಜಂಕ್ಷನ್ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‍ನ ವ್ಯವಸ್ಥಾಪಕ ರಂಜಿತ್ ರಮೇಶನ್ ಅವರ ಚರ್ಮದ ಮೇಲೆ ಗುಳ್ಳೆ ಜೀರುಂಡೆಗಳು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಕಾಲಿಗೆ ಸುಟ್ಟಗಾಯಗಳು ಕಂಡುಬಂದ ಕಾರಣ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಗುಳ್ಳೆ ಜೀರುಂಡೆ ದಾಳಿಯನ್ನು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಉದ್ಯೋಗ ಮುಗಿಸಿ ಮನೆಗೆ ಆಗಮಿಸಿದಾಗ ಅವರ ಎಡಗಾಲಿನ ಮೊಣಕಾಲಿನ ಬಳಿ ತುರಿಕೆಯೊಂದಿಗೆ ದಾಳಿಯ ಲಕ್ಷಣ ಪ್ರಾರಂಭವಾಯಿತು ಎಂದು ರಂಜಿತ್ ರಮೇಶನ್ ಹೇಳುತ್ತಾರೆ.
ಮರುದಿನ ತುರಿಕೆ ಬಂದ ಸ್ಥಳದಲ್ಲಿ ಸುಟ್ಟ ಗಾಯ ಕಂಡುಬಂದಿತು. ಸಂಜೆ ನಡೆಯಲು ಸಾಧ್ಯವಿಲದ ಸ್ಥಿತಿ ನಿರ್ಮಾಣವಾಯಿತ್ಲು. ವೈದ್ಯರನ್ನು ಸ|ಂಪರ್ಕಿಸಿದಾಗ ಅವರಿಗೆ ತಾತ್ಕಾಲಿಕವಾಗಿ ಬಳಸಲು ಔಷಧಿ ನೀಡಲಾಯಿತು. ಮರುದಿನ ದೊಡ್ಡ ಗಾತ್ರದ ಸುಟ್ಟ ಗಾಯಗಳು ಕಂಡುಬಂದವೆಂದೂ ಅವರು ಮಾಹಿತಿ ನೀಡಿದ್ದಾರೆ.
ಬಲ ಕಾಲಿನ ಒಂದೇ ಬದಿಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಲಾರಂಭಿಸಿದವು. ಪಾದದ ಕೆಳಭಾಗದಲ್ಲಿ ಸುಟ್ಟ ಗಾಯಗಳೂ ಇದ್ದವು. ಶನಿವಾರ ಬೆಳಿಗ್ಗೆ ಅವರನ್ನು ಜನರಲ್ ಆಸ್ಪತ್ರೆಯಲ್ಲಿ ಚರ್ಮರೋಗ ವಿಭಾಗಕ್ಕೆ ದಾಖಲಿಸಲಾಯಿತು. ಬ್ಲಿಸ್ಟರ್ ಬೀಟ್ ಆಕ್ರಮಣ ಎಂದು ಬಳಿಕ ಪತ್ತೆಹಚ್ಚಲಾಯಿತೆಂದು ರಂಜಿತ್ ರಮೇಶನ್ ಹೇಳುತ್ತಾರೆ.
ಪುನ್ನಪ್ರದಲ್ಲೂ ಒಬ್ಬ ವ್ಯಕ್ತಿಯಲ್ಲಿ ಇದೇ ರೀತಿ ಸುಟ್ಟ ಗಾಯಗಳು ಪತ್ತೆಯಾಗಿದೆ. ಕಳೆದ ತಿಂಗಳು, ಎರ್ನಾಕುಳಂನ ಕಾಕ್ಕನಾಡ್ ಪ್ರದೇಶದಲ್ಲಿ ಸುಮಾರು 100 ಜನರಿಗೆ ಈ ರೀತಿಯ ಗುಳ್ಳೆ ಜೀರುಂಡೆ ಎಂದು ಕರೆಯಲಾಗುವ ಸಣ್ಣ ಕೀಟದಿಂದ ಸುಟ್ಟುಗಾಯಗಳಾಗಿರುವುದು ಪತ್ತೆಯಾಗಿತ್ತೆಂದು ಮೂಲಗಳು ತಿಳಿಸಿದೆ.
ಬ್ಲಿಸ್ಟರ್ ಜೀರುಂಡೆ (ಆಸಿಡ್ ಫ್ಲೈ) ಕೀಟವಾಗಿದ್ದು, ಇದು ಚರ್ಮದ ಕಾಯಿಲೆಗೆ ಕಾರಣವಾಗುವ ಬ್ಲಿಸ್ಟರ್ ಬೀಟಲ್ ಡರ್ಮಟೈಟಿಸ್. ಮಳೆಗಾಲದಲ್ಲಿ ಅವು ಹೆಚ್ಚು ಸಕ್ರಿಯವಾಗಿರುತ್ತವೆ. ಅವು ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಹೆಚ್ಚು ಕಾಣಬರುತ್ತದೆ. ರಾತ್ರಿ ವೇಳೆ ಇವುಗಳು ಬೆಳಕಿನ ಪ್ರದೇಶಗಳಿಗೆ ಆಕರ್ಷಿತವಾಗುತ್ತವೆ.
ಇವು ಕಚ್ಚಲ್ಪಟ್ಟಾಗ ವ್ಯಕ್ತಿಗಳ ದೇಹದೊಳಗೆ ಈ ಕೀಟದ ಸ್ರವ ದಾಟಲ್ಪಡುತ್ತದೆ. ಜೊತೆಗೆ ಕೆಲವು ಭಾಗಗಳಲ್ಲಿ ಕೆಂಪು ದದ್ದುಗಳೇಳುವುದು ಮತ್ತು ಸುಟ್ಟ ಗಾಯಗಳು ಕಂಡುಬರುತ್ತವೆ. ಈ ಸ್ರವ ದೇಹದಲ್ಲಿ ದೀರ್ಘಕಾಲ ಇದ್ದರೆ, ಸುಟ್ಟ ಆಳ ಹೆಚ್ಚಾಗುತ್ತದೆ ಮತ್ತು ಚರ್ಮ ಸಿಪ್ಪೆ ಸುಲಿದಂತಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ರಾತ್ರ ವೇಳೆ ಮನೆ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚುವುದು ಮುಖ್ಯ ಪರಿಹಾರವಾಗಿದೆ. ಕತ್ತಲು ಕೋಣೆಯಲ್ಲಿ ಮೊಬೈಲ್ ಪೋನ್ ಲೈಟ್ ಇದ್ದರೆ ಅದರಿಂದಲೂ ಆಕರ್ಷಿತವಾಗಿ ದಾಳಿ ಇಡುವ ಈ ಕೀಟದಿಂದ ಮುಖ ಮತ್ತು ಕೈಗಳಿಗೆ ಆ ಸಮಸ್ಯೆ ಬಾಧಿಸುತ್ತದೆ. ಇವು ದೇಹದ ಭಾಗಗಳಲ್ಲಿ ಕಂಡುಬಂದಲ್ಲಿ ಅವುಗಳನ್ನು ದೂಡಿ ಬಿಸುಟುವ ಬದಲು ಅಲ್ಲಾಡಿಸಿ ನಿವಾಳಿಸುವುದು ಉಚಿತ ಎಂದು ತಜ್ಞರು ತಿಳಿಸಿದ್ದಾರೆ.