ನವದೆಹಲಿ: ಸೋಮವಾರವಷ್ಟೇ ಹೊಸದಾಗಿ ಬಿಡುಗಡೆಯಾಗಿದ್ದ ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್ ಗೊಂದಲ ಮಂಗಳವಾರವೂ ಮುಂದುವರೆದಿದ್ದು, ವಾರದೊಳಗೆ ವ್ಯವಸ್ಥೆ ಸರಿಹೋಗುವ ವಿಶ್ವಾಸವಿದೆ ಎಂದು ವೆಬ್ ಸೈಟ್ ನಿರ್ವಹಿಸುತ್ತಿರುವ ಟೆಕ್ ದೈತ್ಯ ಇನ್ಫೋಸಿಸ್ ಹೇಳಿದೆ.
ಮಂಗಳವಾರ ಕೂಡ ತೆರಿಗೆ ಇಲಾಖೆಯ ನೂತನ ವೆಬ್ ಸೈಟ್ ನ ತಾಂತ್ರಿಕ ದೋಷ ಮುಂದುವರೆದಿದ್ದು, ಪರಿಣಾಮ ಸ್ವತಃ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಟ್ವೀಟರ್ ಮೂಲಕ, ವೆಬ್‌ಸೈಟ್ ಆಧುನೀಕರಿಸಿದ್ದ ಇಸ್ಫೋಸಿಸ್ ಮತ್ತು ಅದರ ಮುಖ್ಯಸ್ಥ ನಂದನ್ ನಿಲೇಕಣಿ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
The much awaited e-filing portal 2.0 was launched last night 20:45hrs.
— Nirmala Sitharaman (@nsitharaman) June 8, 2021
I see in my TL grievances and glitches.
Hope @Infosys & @NandanNilekani will not let down our taxpayers in the quality of service being provided.
Ease in compliance for the taxpayer should be our priority. https://t.co/iRtyKaURLc
ಈ ಕುರಿತಂತೆ ಟ್ವೀಟ್ ಮಾಡಿದ್ದ ನಿರ್ಮಲಾ ಸೀತಾರಾಮನ್, 'ಹಲವು ಬಳಕೆದಾರರು ಪೋರ್ಟಲ್ ಬಗ್ಗೆ ಟ್ವೀಟರ್‌ನಲ್ಲಿ ಸಾಲು ಸಾಲು ದೂರು ದಾಖಲಿಸುತ್ತಿದ್ದಾರೆ. ನನ್ನ ಟ್ವೀಟರ್ ಟೈಮ್‌ಲೈನ್‌ನಲ್ಲಿ ವೆಬ್‌ಪೋರ್ಟಲ್ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಸೇವೆಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಇನ್ಪೋಸಿಸ್ ಮತ್ತು ನಂದನ್ ನಿಕಲೇಣಿ ತೆರಿಗೆದಾರರನ್ನು ನಿರಾಸೆ ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ತೆರಿಗೆದಾರರಿಗೆ ಗುಣಮಟ್ಟದ ಸೇವೆ ನೀಡುವುದು ನಮ್ಮ ಆದ್ಯತೆಯಾಗಿರಬೇಕು ಎಂದು ಹೇಳಿದ್ದಾರೆ.
Our teams are making progress to address the technical issues. We expect the system to stabilize in the course of this week. https://t.co/kNIIqJkIOH
— Infosys (@Infosys) June 9, 2021
ಅತ್ತ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡುತ್ತಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಇನ್ಫೋಸಿಸ್ ಸಂಸ್ಥೆ, 'ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ತಂಡಗಳು ಪ್ರಗತಿ ಸಾಧಿಸುತ್ತಿವೆ. ವಾರದ ಅವಧಿಯಲ್ಲಿ ವ್ಯವಸ್ಥೆಯು ಸ್ಥಿರಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಟ್ವೀಟ್ ಮಾಡಿದೆ.
The new e-filing portal will ease the filing process and enhance end user experience. @nsitharaman ji, we have observed some technical issues on day one, and are working to resolve them. @Infosys regrets these initial glitches and expects the system to stabilise during the week. https://t.co/LocRBPCzpP
— Nandan Nilekani (@NandanNilekani) June 8, 2021
ಮುಂದಿನ ಪೀಳಿಗೆಯ ಆದಾಯ ತೆರಿಗೆ ಸಲ್ಲಿಕೆ ವ್ಯವಸ್ಥೆಯನ್ನು 63 ದಿನಗಳಿಂದ ಒಂದು ದಿನಕ್ಕೆ ಇಳಿಸಲು ಮತ್ತು ಮರುಪಾವತಿಯನ್ನು ತ್ವರಿತಗೊಳಿಸಲು ಇನ್ಫೋಸಿಸ್ ನೊಂದಿಗೆ ಕೇಂದ್ರ ಆದಾಯ ತೆರಿಗೆ ಇಲಾಖೆ 2019 ರಲ್ಲಿಸ ವೆಬ್ ಸೈಟ್ ನಿರ್ವಹಣೆ ಸಂಬಂಧ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ನೂತನ ವೆಬ್ ಸೈಟ್ ಗೆ ಸೋಮವಾರ ಚಾಲನೆ ನೀಡಲಾಗಿತ್ತು. ಆದರೆ ಆರಂಭವಾದ ಮೊದಲ ದಿನವೇ ಪೋರ್ಟಲ್ ನಲ್ಲಿ ಹಲವು ತಾಂತ್ರಿಕ ದೋಷಗಳು ಕಂಡಬಂದಿತ್ತು. ಈ ಬಗ್ಗೆ ನಂದನ್ ನೀಲೇಕಣಿ ಅವರು ತಾಂತ್ರಿಕ ದೋಷ ಸರಿಪಡಿಸಲು ನಮ್ಮ ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದು ಟ್ವೀಟ್ ಮಾಡಿದ್ದರು.