ಬದಿಯಡ್ಕ: ಭಾರತೀಯ ಜನತಾ ಪಕ್ಷ ವಿರುದ್ಧ ರಾಜಕೀಯ ದ್ವೇಷದಿಂದ ಪಕ್ಷವನ್ನು ನಾಶಮಾಡುವ ಹುನ್ನಾರ ಭಾಗವಾಗಿ ನೇತಾರ ಹೆಸರಿಗೆ ಜನರ ಮಧ್ಯದಲ್ಲಿ ಮಸಿಬಳಿಯುವ ಪ್ರಯತ್ನ ನಡೆಸುತ್ತಿರುವುದಾಗಿ ಆರೋಪಿಸಿ ಕೇರಳ ಸರ್ಕಾರ ಮತ್ತು ಪೋಲೀಸ್ ಇಲಾಖೆಯ ವಿರುದ್ಧ ಬಿಜೆಪಿ ರಾಜ್ಯಸಮಿತಿ ರಾಜ್ಯಾದ್ಯಂತ ಗುರುವಾರ ಹಮ್ಮಿಕೊಂಡ ಪ್ರತಿಭಟನೆಯು ಬದಿಯಡ್ಕದಲ್ಲಿಯೂ ನಡೆಯಿತು. ಬದಿಯಡ್ಕ ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಅವಿನಾಶ ರೈ ಮಾತನಾಡಿದರು.