ತಿರುವನಂತಪುರ: ಪ್ರಸ್ತುತ ರಾಜ್ಯದಲ್ಲಿ ಅಣೆಕಟ್ಟುಗಳ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಕೆ.ಎಸ್.ಇ.ಬಿ.(ಕೇರಳ ಸ್ಟೇಟ್ ಇಲೆಕ್ರ್ಟಿಸಿಟಿ ಬೋರ್ಡ್) ಹೇಳಿದೆ. ಮಳೆ ಮತ್ತು ಲಾಕ್ ಡೌನ್ ನಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ ತೀವ್ರವಾಗಿ ಕುಸಿದಿದೆ ಎಂದು ಕೆಎಸ್‍ಇಬಿ ಅಧ್ಯಕ್ಷ ಎನ್.ಎಸ್. ಪಿಳ್ಳೈ ನಿನ್ನೆ ಮಾಧ್ಯಮಗಳಿಗೆ ತಿಳಿಸಿರುವರು. ಪ್ರಸ್ತುತ ಆದಿರಪ್ಪಳ್ಳಿ ಯೋಜನೆಯನ್ನು ಕಾರ್ಯಗತಗೊಳಿಸುವ ಅಗತ್ಯ ಇಲ್ಲ ಎಂದು ಕೆ.ಎಸ್,ಇ.ಬಿ ಅಧ್ಯಕ್ಷರು ಸ್ಪಷ್ಟಪಡಿಸಿದರು.
ಈ ವರ್ಷ ಮೇ ತಿಂಗಳಲ್ಲಿ ರಾಜ್ಯದಲ್ಲಿ ವ್ಯಾಪಕವಾದ ಭಾರಿ ಮಳೆಯಾಗಿದೆ. ಮಾನ್ಸೂನ್ ನಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ. ಆದರೆ ಅಣೆಕಟ್ಟುಗಳ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಕೆ.ಎಸ್.ಇ.ಬಿ. ಅಧ್ಯಕ್ಷ ಎನ್.ಎಸ್. ಪಿಳ್ಳೈ ಹೇಳಿದರು.
ಲಾಕ್ ಡೌನ್ ಮತ್ತು ಮಳೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಬಳಕೆ ತೀವ್ರವಾಗಿ ಕುಸಿದಿದೆ. ಇದರ ಪರಿಣಾಮವಾಗಿ ಅಣೆಕಟ್ಟುಗಳಿಂದ ಹೆಚ್ಚಿನ ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲ ಎಂದಿರುವರು.