ತಿರುವನಂತಪುರ: ರಾಜ್ಯದ ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಅವರು ಮಂಡಿಸಿದ ಎರಡನೇ ಪಿಣರಾಯಿ ಸರ್ಕಾರದ ಮೊದಲ ಬಜೆಟ್ ನಿರಾಶಾದಾಯಕವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಕಳೆದ ಬಜೆಟ್‍ನಲ್ಲಿ ಪರಿಚಯಿಸಲಾದ ಪ್ರಮುಖ ಮೀಸಲಾದ 20,000 ಕೋಟಿ ರೂ.ಗಳ ಹಣಕಾಸು ಪ್ಯಾಕೇಜ್‍ನ ಮರು ಘೋಷಣೆ ಜನರಿಗೆ ಸವಾಲಾಗಿದೆ. ಹಣಕಾಸು ಪ್ಯಾಕೇಜ್ ಅಡಿಯಲ್ಲಿ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಬೇಕು ಎಂದು ಸುರೇಂದ್ರನ್ ಒತ್ತಾಯಿಸಿರುವರು.
ಲೋಕೋಪಯೋಗಿ ಗುತ್ತಿಗೆದಾರರ ಬಾಕಿ ಪಾವತಿಸುವುದನ್ನು ಬಿಟ್ಟು ಆರ್ಥಿಕ ಪ್ಯಾಕೇಜ್ ಜನರಿಗೆ ಯಾವ ಪ್ರಯೋಜನಗಳನ್ನು ತಂದಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಬಜೆಟ್ ಕೇಂದ್ರವು ಮಂಜೂರು ಮಾಡಿದ 19,500 ಕೋಟಿ ರೂ.ಗಳನ್ನೇ ಹೊಸ ಹೆಸರಿಂದ ಬಳಸಲಾಗುತ್ತಿದೆ. ಸರ್ಕಾರಕ್ಕೆ ಬೇರೆ ಆದಾಯದ ಮೂಲಗಳಿಲ್ಲ ಎಂಬುದು ಸ್ಪಷ್ಟವಾಗಿದೆ. ಕೊರೋನಾ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಕರ್ನಾಟಕ ಸರ್ಕಾರ ನೇರವಾಗಿ ಆಟೋರಿಕ್ಷಾ ಕಾರ್ಮಿಕರು ಮತ್ತು ರಸ್ತೆ ಬದಿ ವ್ಯಾಪಾರಿಗಳ ಖಾತೆಗಳಿಗೆ ಹಣವನ್ನು ಜಮಾ ಮಾಡಿದೆ. ಆದರೆ ಕೇರಳ ಬಜೆಟ್‍ನಲ್ಲಿ ಅಂತಹ ಯಾವುದೇ ಪ್ರಯತ್ನಗಳಿಲ್ಲ ಎಂದು ಸುರೇಂದ್ರನ್ ಹೇಳಿದ್ದಾರೆ.
ಎಲ್ಲಾ ರಾಜ್ಯಗಳಲ್ಲಿ ತೆರಿಗೆ ಸಂಗ್ರಹವನ್ನು ಸಮರ್ಥವಾಗಿ ಮಾಡಲಾಗಿದ್ದರೂ, ಕೇರಳದಲ್ಲಿ ಇದಕ್ಕಾಗಿ ಯಾವುದೇ ಪ್ರಯತ್ನಗಳಿಲ್ಲ ಎಂದು ಸುರೇಂದ್ರನ್ ಆರೋಪಿಸಿದರು. ಈ ಬಜೆಟ್ ಕೇಂದ್ರ ಯೋಜನೆಗಳ ಪರಿಷ್ಕರಣೆಯನ್ನು ಮಾತ್ರ ನೋಡಬಹುದು. ಕೇಂದ್ರ ಯೋಜನೆಗಳ ಹೆಸರನ್ನು ಮರುನಾಮಕರಣ ಮಾಡಿ ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದ ಪ್ರತಿದಿನ ನೂರಾರು ಜನರು ಸಾಯುತ್ತಿರುವಾಗ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್‍ಗೆ ಅವಕಾಶ ನೀಡದಿರುವುದು ಜನರಿಗೆ ಎಸಗಿರುವ ದ್ರೋಹವಾಗಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.
ಆರ್ಥಿಕತೆಯನ್ನು ಬಲಪಡಿಸಲು ಮತ್ತು ಕೇರಳವನ್ನು ಸಾಲದಿಂದ ಮುಕ್ತಗೊಳಿಸಲು ಬಜೆಟ್‍ನಲ್ಲಿ ಯಾವುದೇ ಪ್ರಯತ್ನಗಳಿಲ್ಲ. ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಬಜೆಟ್‍ನಲ್ಲಿ ದೀರ್ಘಾವಧಿಯ ಹೂಡಿಕೆಗಳಿಲ್ಲ. ದೊಡ್ಡ ಯೋಜನೆಗಳನ್ನು ದೀರ್ಘಾವಧಿಯ ಆಧಾರದ ಮೇಲೆ ಜಾರಿಗೊಳಿಸಿದರೆ ಮಾತ್ರ ಕೇರಳದ ಸಾರ್ವಜನಿಕ ಸಾಲವನ್ನು ಕಡಿಮೆ ಮಾಡಬಹುದು. ಆದರೆ ಹಣಕಾಸು ಸಚಿವರು ಮೂಲಸೌಕರ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಸುರೇಂದ್ರನ್ ಹೇಳಿದ್ದಾರೆ.
ಕುಟ್ಟನಾಡಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆಯ ನಿರೀಕ್ಷೆಯಿದ್ದರೂ ನಿರಾಶೆಯಾಗಿದೆ. ಅಭಿವೃದ್ಧಿಯ ಬಗ್ಗೆ ಬಿಜೆಪಿ ಮತ್ತು ಎಡಪಂಥೀಯರ ಮನೋಭಾವದ ನಡುವಿನ ವ್ಯತ್ಯಾಸ ಇದಾಗಿದೆ. ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಅನಗತ್ಯವಾಗಿ ಟೀಕಿಸಿದರು. ದೊಡ್ಡ ಕಾಪೆರ್Çೀರೇಟ್‍ಗಳ ವಿರುದ್ಧ ಗಂಟೆಗೆ ನಲವತ್ತು ಬಾರಿ ಮಾತನಾಡುವ ಎಡಪಂಥೀಯರು ಚಹಾ ತೋಟ ಕ್ಷೇತ್ರದ ಕಾಪೆರ್Çರೇಟ್‍ಗಳಿಗೆ ರಿಯಾಯಿತಿಗಳನ್ನು ಘೋಷಿಸಿದ್ದಾರೆ ಎಂದು ಸುರೇಂದ್ರನ್ ಹೇಳಿದ್ದಾರೆ.