ಬದಿಯಡ್ಕ: ಪೆರಡಾಲ ಕೊರಗ ಕಾಲನಿ ವಾಸಿಗಳಿಗೆ ಕೋವಿಡ್ 19 ರೋಗ ಬಾಧಿಸಿದ ಹಿನ್ನೆಲೆಯಲ್ಲಿ ಬದಿಯಡ್ಕ ಸೇವಾ ಭಾರತಿ ಕಾರ್ಯಕರ್ತರು ಕಾಲನಿ ಪ್ರದೇಶಗಳನ್ನು ಕ್ರಿಮಿನಾಶಕಗಳನ್ನು ಬಳಸಿ ಅಣುಮುಕ್ತಗೊಳಿಸಿದರು. ಕಾಲನಿಯ 12 ಕುಟುಂಬದ 14 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಕಾಲನಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಅಲ್ಲಿನ 47 ಕುಟುಂಬಗಳಿಗೆ ಬೇಕಾದ ಅಗತ್ಯವಸ್ತುಗಳನ್ನೊಳಗೊಂಡ ಆಹಾರ ಕಿಟ್‍ಗಳನ್ನು ಸೇವಾಭಾರತಿ ವತಿಯಿಂದ ವಿತರಿಸಲಾಯಿತು.
ಬದಿಯಡ್ಕ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ, ವಾರ್ಡು ಜನಪ್ರತಿನಿಧಿ ಕೆ.ಎನ್.ಕೃಷ್ಣ ಭಟ್ ಕಾಲನಿವಾಸಿಗಳು ಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಮಾರ್ಗದರ್ಶನವನ್ನು ನೀಡಿದರು. ಯುವಮೋರ್ಚಾ ಮಂಡಲ ಅಧ್ಯಕ್ಷ ರಕ್ಷಿತ್ ಕೆದಿಲ್ಲಾಯ, ಸೇವಾ ಭಾರತಿಯ ಕಾರ್ತಿಕ್ ಕಾಮತ್, ಧನುಶ್ ನೇತೃತ್ವ ನೀಡಿದರು. ಗ್ರಾಮಪಂಚಾಯಿತಿ ಸದಸ್ಯ ಶಂಕರ ಡಿ.,ಬದಿಯಡ್ಕ ಗ್ರಾಪಂ ಪ್ಲಾನಿಂಗ್ ಸಮಿತಿ ಸದಸ್ಯ ಮಹೇಶ್ ವಳಕ್ಕುಂಜ, ಶಿವಪ್ರಸಾದ ಬದಿಯಡ್ಕ, ದೀಕ್ಷಿತ್, ಕಾರ್ಯಕರ್ತರು ಸಹಕರಿಸಿದರು. ಪೆರಡಾಲ ಎಂ.ಜಿ.ಎಲ್.ಸಿಯ ಅಧ್ಯಾಪಕ ಬಾಲಕೃಷ್ಣ ಅಚ್ಚಾಯಿ ಸ್ವಾಗತಿಸಿದರು.