ತಿರುವನಂತಪುರ: ಲಕ್ಷದ್ವೀಪ ವಿವಾದ ಸಂಬಂಧ ಸೋಮವಾರ ಕೇರಳ ವಿಧಾನಸಭೆಯಲ್ಲಿ ಮಂಡಿಸಿದ ಕೇಂದ್ರ ಸರ್ಕಾರದ ವಿರುದ್ದ ನಿಲುವಳಿಯ ಬಗ್ಗೆ ಕೇಂದ್ರ ಸಚಿವ ವಿ.ಮುರಳೀಧರನ್ ಪ್ರತಿಕ್ರಿಯೆ ನೀಡಿದ್ದು, ಕೇಂದ್ರವನ್ನು ವಿರೋಧಿಸುವ ಯಾವ ವಿಷಯವಾದರೂ ಸರಿ ಅಗತ್ಯ-ಅನಗತ್ಯಗಳನ್ನು ಗಮನಿಸಿದೆ ನಿರ್ಲಜ್ಜರಾಗಿ ಕೆಲವೊಂದು ವಿಷಯಗಳನ್ನು ಅನುಸರಿಸುವುದು ಕೇರಳದ ಇಂದಿನ ಶೈಲಿ ಎಂದು ಲೇವಡಿ ಮಾಡಿದರು. ಸಂಘ ಪರಿವಾರ್-ಬಿಜೆಪಿ ವೈರತ್ವವು ವಿಧಾನಸಭೆಯ ಸಮಗ್ರತೆಗೆ ಕಳಂಕ ತರುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಅವರು ಹೇಳಿದರು. ಅವರು ಫೇಸ್‍ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳದ ರೆಸಲ್ಯೂಶನ್ ಉತ್ಸಾಹಭರಿತವಾಗಿತ್ತು. ಕೇಂದ್ರವನ್ನು ವಿರೋಧಿಸಲು ಪ್ರತಿನಿತ್ಯ ಅವರಿಗೊಂದೊಂದು ವಿಷಯಗಳು ಬೇಕು. ನಿನ್ನೆ ಮಂಡಿಸಿದ ನಿರ್ಣಯದ ಹೃದಯಭಾಗದಲ್ಲಿ, "ತೆಂಗಿನಕಾಯಿಗಳನ್ನು ಸಹ ಕೇಸರಿಯಿಂದ ಮುಚ್ಚಲಾಗುತ್ತದೆ" ಎಂಬ ಮಾತು ಇದೆ. ಬಿಜೆಪಿ ವಿರೋಧಿ ಜನರು ಎಷ್ಟು ಕುರುಡರಾಗಿದ್ದಾರೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಮರಕ್ಕೆ ಹಾನಿಯಾಗದಂತೆ ಮರಗಳನ್ನು ಸುಣ್ಣದ ಗಾರೆಗಳಿಂದ ಲೇಪಿಸಲಾಗಿದೆ ಮತ್ತು ಕೇಸರಿ ಬಣ್ಣವಲ್ಲ ಎಂದು ಲಕ್ಷದ್ವೀಪದಲ್ಲಿ ಮೊನ್ನೆಯೇ ಅಲ್ಲಿಯ ಅನೇಕ ಜನರು ಗಮನಸೆಳೆದಿರುವರು. ಕೇಸರಿ ಬಣ್ಣ ಬಳಿಯಲಾಗಿದೆ ಎಂಬ ಸುದ್ದಿ ನೀಡಿದ ಪತ್ರಿಕೆ ಅದನ್ನು ಹಿಂತೆಗೆದುಕೊಂಡಿದೆ ಎಂದು ಮುರಲೀಧರನ್ ಹೇಳಿದ್ದಾರೆ.
ಮುಂಬೈ ಮೆಟ್ರೋ ಕಾಪೆರ್Çರೇಷನ್ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಮರಗಳಿಗೆ ಆರೋಗ್ಯಕ್ಕಾಗಿ ಸುಣ್ಣ ಮತ್ತು ಮಣ್ಣಿನಿಂದ (ತಿಳಿ ಕೆಂಪು) ಲೇಪನ ಮಾಡಲಾಗುತ್ತದೆ. ಕೇರಳದÀ ಜನರು ಅದರಾಚೆಗಿನ ದೇಶಾದ್ಯಂತ ಪ್ರವಾಸ ಮಾಡಿದ ರಾಜಕೀಯ ಮುಖಂಡರಿಗೆ ಅದು ತಿಳಿದಿರಬಹುದು. ಆದರೂ ಪ್ರಜಾಪ್ರಭುತ್ವದ ದೇವಾಲಯವಾದ ಅಸೆಂಬ್ಲಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಇದನ್ನು ಕೇಸರಿಯಾಗಿ ಬಿಂಬಿಸಿ ತಮ್ಮ ಬುದ್ದಿ, ತಿಳುವಳಿಕೆಯನ್ನು ಸಮರ್ಥವಾಗಿ ತೋರಿಸಿಕೊಟ್ಟಿದ್ದಾರೆ. ಇಂತಹ ಹಸಿ ಸುಳ್ಳು ಕೇರಳ ವಿಧಾನಸಭೆಯ ದಾಖಲೆಗಳೊಂದಿಗೆ ಸೇರಿಕೊಳ್ಳಲಿದೆ. ನಿರ್ಣಯಕ್ಕೆ ತಿದ್ದುಪಡಿಯನ್ನು ಪ್ರಸ್ತಾಪಿಸಿದ ಯಾವೊಬ್ಬ ಸದಸ್ಯನಿಗೂ ಕನಿಷ್ಠ ಜ್ಞಾನವೆಂಬುದಿಲ್ಲವೇ? ಆದರೆ ಹಲವರಿಗೆ ಸತ್ಯ ಗೊತ್ತಿರಬಹುಉದ. ಆದರೆ ಸಂಘ ಪರಿವಾರವನ್ನು ತೊಡೆದುಹಾಕಲು ಸಂಘಟಿತ ಪ್ರಯತ್ನದಲ್ಲಿ ಯಾರು ಸತ್ಯವನ್ನು ಹೇಳಲು ಆಸಕ್ತಿ ಹೊಂದಿದ್ದಾರೆ ಎಂದು ಮುರಳೀಧರನ್ ಕೇಳಿರುವರು.