ಪತ್ತನಂತಿಟ್ಟು,ಸನ್ನಿಧಾನ: ಮಿಥುನ ಮಾಸಾರಂಭದೊಂದಿಗೆ ತಿಂಗಳ ಪೂಜೆಗಳಿಗಾಗಿ ಶ್ರೀಕ್ಷೇತ್ರ ಶಬರಿಮಲೆಯ ಬಾಗಿಲು ಇಂದು ಸಂಜೆ 5 ಗಂಟೆಗೆ ತೆರೆಯಲಿದೆ. ಕೊರೋನದ ಹಿನ್ನೆಲೆಗೆ ಭಕ್ತರಿಗೆ ಪ್ರವೇಶವಿಲ್ಲ. ನಡೆ ತೆರೆದ ದಿನವಾದ ಇಂದು ವಿಶೇಷ ಪೂಜೆಗಳಿಲ್ಲ.
ದೇವಾಲಯದ ಅರ್ಚಕ ಕಂಠರರ್ ರಾಜೀವರ್ ಅವರ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ವಿ.ಕೆ.ಜಯರಾಜ್ ಪೋತ್ತಿ ದೇಗುಲದಲ್ಲಿ ದೀಪಗಳನ್ನು ಬೆಳಗಿಸಲಿದ್ದಾರೆ. ಮಿಥುನ ಮಾಸದ ಸಾಮಾನ್ಯ ಪೂಜೆಗಳು ನಾಳೆಯಿಂದ ನಡೆಯಲಿದೆ. ಮಿಥುನಮಾಸ ಪೂಜೆ ಮುಗಿದ 19 ರಂದು ರಾತ್ರಿ 8 ಗಂಟೆಗೆ ಹರಿವರಾಸನಂ ಹಾಡಲಾಗುವುದು.