ತಿರುವನಂತಪುರ: ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಾಗ, ಏಳು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪ್ರಸ್ತಾವನೆಯನ್ನು ಚರ್ಚಿಸಲಾಗುತ್ತಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರಿ ನೌಕರರು ವರದಕ್ಷಿಣೆ ಸ್ವೀಕರಿಸದಂತೆ ಪ್ರಸ್ತಾಪವನ್ನು ಮುಂದಿಟ್ಟರು.
ಕೊಲ್ಲಂನ ಸಾಸ್ತಾಂಕೋಟಾದ ವಿಸ್ಮಯ ವಿ ನಾಯರ್ ನಿನ್ನೆ ಪತಿಯಿಂದ ಕಿರುಕುಳಕ್ಕೊಳಗಾಗಿ ಬಳಿಕ ಮೃತ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ವರದಕ್ಷಿಣೆ ಕುರಿತು ಮತ್ತೊಮ್ಮೆ ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. ಏತನ್ಮಧ್ಯೆ, ಸರ್ಕಾರಿ ನೌಕರರು ವರದಕ್ಷಿಣೆ ಸ್ವೀಕರಿಸುವನ್ನು ಕೊನೆಗೊಳಿಸುವ ಉದ್ದೇಶದಿಂದ ಆ ಸಮಯದಲ್ಲಿ ಉಮ್ಮನ್ ಚಾಂಡಿ ಕೈಗೊಂಡ ಕ್ರಮಗಳು ಗಮನಾರ್ಹ. ದುರದೃಷ್ಟವಶಾತ್, ಅವರ ಯಾವುದೇ ಸೂಚನೆಗಳನ್ನು ಕಾರ್ಯಗತಗೊಳಿಸಲಾಗಿಲ್ಲ ಎಂಬುದು ವಾಸ್ತವ.
ವಿವಾಹಿತ ಸರ್ಕಾರಿ ನೌಕರರು ವರದಕ್ಷಿಣೆ ಪಡೆದಿಲ್ಲ ಎಂದು ತಮ್ಮ ವಿಭಾಗದ ಮುಖ್ಯಸ್ಥರಿಗೆ ಅಫಿಡವಿಟ್ ನೀಡಬೇಕೆಂದು ಸೂಚಿಸಿದ್ದರು. ಈ ಅಫಿಡವಿಟ್‍ಗೆ ಪುರುಷನ ಪತ್ನಿ, ತಂದೆ ಮತ್ತು ಪಾಲಕರು ಸಹಿ ಹಾಕಬೇಕು.
ಅಫಿಡವಿಟ್ ನ್ನು ಇಲಾಖೆಯ ಮುಖ್ಯಸ್ಥರಿಗೆ ಸಲ್ಲಿಸಬೇಕು ಮತ್ತು ವರದಿಯು ವರದಕ್ಷಿಣೆ ನಿಷೇಧ ಕಾಯ್ದೆಯ ವ್ಯಾಪ್ತಿಗೆ ಬರಲಿದೆ ಎಂದು ಅಂದಿನ ಮುಖ್ಯಮಂತ್ರಿ ಹೇಳಿದ್ದರು. ಆದರೆ ಆ ಎಲ್ಲಾ ಸಲಹೆಗಳು ಜಾರಿಗೊಂಡಿಲ್ಲ. ಇದರೊಂದಿಗೆ, ಅನೇಕ ಯುವತಿಯರು ಚಿತ್ರಹಿಂಸೆಗೊಳಗಾದರೂ ಪ್ರತಿರೋಧ ವ್ಯಕ್ತಪಡಿಸುತಿಲ್ಲ.
ರಾಜ್ಯದಲ್ಲಿ ಯುವತಿಯರು ಬೆಳೆದು ದೊಡ್ಡವರಾಗುತ್ತಿರುವಂತೆ ತಮ್ಮ ಪುತ್ರಿಯರನ್ನು ಸರ್ಕಾರಿ ನೌಕರರಿಗೆ ವಿವಾಹ ಮಾಡಿಕೊಡಲು ಪೋಷಕರು ಹೆಚ್ಚು ಆಸಕ್ತಿ ವಹಿಸುತ್ತಾರೆ. ಕೊನೆಯ ದರ್ಜೆಯ ಉದ್ಯೋಗಿ ಕೂಡ ದೊಡ್ಡ ವರದಕ್ಷಿಣೆ ಸ್ವೀಕರಿಸುತ್ತಾರೆ. ವರದಕ್ಷಿಣೆ ಕೇಳುವವರು ಹಲವರಿದ್ದಾರೆ.
ಈ ಸಂದರ್ಭದಲ್ಲಿ, ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕಿದ್ದು ಆದರೆ ಅದನ್ನು ಸರಿಯಾಗಿ ಜಾರಿಗೆ ತರಲಾಗಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆಶಿಸುವವರು ಇನ್ನೂದ್ದಾರೆ.