ಬದಿಯಡ್ಕ: ರಾಜ್ಯದಲ್ಲಿ ನಡೆದಿರುವ ಸಾವಿರ ಕೋಟಿ ರೂಪಾಯಿಯ ಅರಣ್ಯ ಲೂಟಿಗೆ ಕಾರಣರಾದ ಎಲ್ ಡಿ ಫ್ ಸಂಘಟನೆ ಹಾಗೂ ಸರ್ಕಾರಕ್ಕೆ ಎದುರಾಗಿ ಭಾರತೀಯ ಜನತಾಪಾರ್ಟಿ ರಾಜ್ಯ ವ್ಯಾಪಕವಾಗಿ ಹಮ್ಮಿಕೊಂಡ ಪ್ರತಿಭಟನಾ ಮುಷ್ಕರದ ಭಾಗವಾಗಿ ಕಾರಡ್ಕ ಪಂಚಾಯತಿ ಮಟ್ಟದ ಪ್ರತಿಭಟನೆಯನ್ನು ಮುಳ್ಳೇರಿಯ ಗ್ರಾಮಕಚೇರಿ ಮುಂಭಾಗದಲ್ಲಿ ನಡೆಯಿತು.
ಪ್ರತಿಭಟನೆಯನ್ನು ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಂ ಸುಧಾಮ ಗೋಸಾಡ ಉದ್ಘಾಟಿಸಿದರು. ಪಕ್ಷದ ಕಾರಡ್ಕ ಪಂಚಾಯಿತಿ ಅಧ್ಯಕ್ಷ ವಸಂತ ಕೆ ಅಧ್ಯಕ್ಷತೆ ವಹಿಸಿದರು ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಜನನಿ ಎಂ, ರಾಜ್ಯ ಸಮಿತಿ ಸದಸ್ಯ ಶಿವಕೃಷ್ಣ ಭಟ್, ಗ್ರಾಮಪಂಚಾಯತಿ ಅಧ್ಯಕ್ಷ ನ್ಯಾಯವಾದಿ. ಗೋಪಾಲಕೃಷ್ಣ, ಮಂಡಲ ಕಾರ್ಯದರ್ಶಿ ಗೋಪಾಲಕೃಷ್ಣ ಎಂ, ಗ್ರಾಮಪಂಚಾತಿ ಸದಸ್ಯ ಸಂತೋಷ್ ಮೊದಲಾದವರು ಮಾತನಾಡಿದರು. ಪ್ರಶಾಂತ್ ಸ್ವಾಗತಿಸಿ, ಪಂಚಾಯತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಎಂ ವಂದಿಸಿದರು.