ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಿಹಿ ತುಳಸಿ ಕೃಷಿ ಆರಂಭಿಸುವ ಮೂಲಕ ಮುಳಿಯಾರು ಕುಟುಂಬಶ್ರೀ ಸಿ.ಡಿ.ಎಸ್. ಗಮನ ಸೆಳೆಯುತ್ತಿದೆ.
ಸಕ್ಕರೆಗಿಂತ 30 ಪಟ್ಟು ಅಧಿಕ ಸಿಹಿ ಹೊಂದಿರುವ ತುಳಸಿ ಸಸಿ ಇದಾಗಿದೆ. ಔಷಧ ತಯಾರಿಗಾಗಿ ಈ ಸಸಿಯ ಎಲೆಯನ್ನು ಬಳಸಲಾಗುತ್ತದೆ. ಈ ಎಲೆಯನ್ನು ಆಹಾರದಲ್ಲೂ ಬಳಸಬಹುದು ಎಂದು ಆಹಾರ ಸುರಕ್ಷೆ ಇಲಾಖೆ ಅನುಮತಿ ನೀಡಿದೆ. ಶೀತಲ ಪಾನೀಯ, ಮಿಠಾಯಿ, ಬಿಯರ್, ಬಿಸ್ಕತ್ತು ಇತ್ಯಾದಿಗಳ ತಯಾರಿಯಲ್ಲೂ ಸಕ್ಕರೆಗೆ ಪರ್ಯಾಯವಾಗಿ ಸಿಹಿ ತುಳಸಿ ಬಳಸಬಹುದು ಎಂಬುದು ಈ ಕೃಷಿಯ ಮಹತ್ವವನ್ನು ಹೆಚ್ಚಿಸಿದೆ.
ಆರೋಗ್ಯ ವರ್ಧನೆಗೆ ಸಿಹಿ ತುಳಿಸಿ ಪೂರಕ ಎಂದು ಆರೋಗ್ಯ ಪರಿಣತರು ಅಭಿಪ್ರಾಯಪಡುತ್ತಾರೆ. ಸಿಹಿಮೂತ್ರ, ರಕ್ತದೊತ್ತಡ ಇತ್ಯಾದಿಗಳನ್ನು ನಿಯಂತ್ರಸಿಲು ಪೂರಕ, ಮೊಡವೆ, ತಲೆ ಕೂದಲು ಉದುರುವಿಕೆ ಇತ್ಯಾದಿಗಳನ್ನು ತಡೆಯುತ್ತದೆ ಎಂಬಿತ್ಯಾದಿ ವಿಚಾರಗಳು ಇದರ ಪ್ರಯೋಜನಗಳಾಗಿವೆ.
ಸ್ಥಳೀಯ ಕೃಷಿಕೆ ಖೈರುನ್ನೀಸಾ ಅವರ ಕೃಷಿತಾಣದಲ್ಲಿ 500 ಸಿಹಿ ತುಳಸಿ ಸಸಿಗಳನ್ನು ನೆಟ್ಟು ಪೆÇೀಷಿಸಲಾಗುತ್ತಿದೆ. ಮುಂದಿನದ ಇನಗಳಲ್ಲಿ ಇತರ ವಾರ್ಡ್ ಗಳಲ್ಲೂ ಈ ಕೃಷಿ ನಡೆಸುವುದು ಸಿ.ಡಿ.ಎಸ್.ನ ಉದ್ದೇಶವಾಗಿದೆ.
ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿಜಿ ಮಾಥ್ಯೂ ಸಸಿ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಮುಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಪಿ.ಮಿನಿ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಮಿಷನ್ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್ ಮುಖ್ಯ ಅತಿಥಿಯಾಗಿದ್ದರು. ಎ.ಡಿ.ಎಂ.ಸಿ. ಸಿ.ಎಚ್.ಇಕ್ಬಾಲ್, ರೈಸಾ ರಾಶಿದ್, ಇ.ಮೋಹನನ್, ಶ್ಯಾಮಲಾ, ರವೀಂದ್ರನ್ ಪೆÇಯ್ಯಕ್ಕಾಲ್, ಮೈಮೂನಾ, ಝಕೀನಾ, ಶ್ರೀನೇಷ್ ಬಾವಿಕ್ಕರ ಮೊದಲಾದವರು ಉಪಸ್ಥಿತರಿದ್ದರು.