ತಿರುವನಂತಪುರ: ವಿಶ್ವ ರಕ್ತದಾನ ದಿನಾಚರಣೆಯ ಅಂಗವಾಗಿ ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ನಿನ್ನೆ ರಕ್ತದಾನ ಮಾಡಿದರು. ಪೆರೂರ್ಕಾಡ್ ಎಸ್.ಎ.ಪಿ. ಶಿಬಿರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ರಕ್ತದಾನ ಮಾಡಿದರು. ಐ.ಜಿ. ಜೊತೆಗಿನ ಎಲ್ಲಾ 25 ಅಧಿಕಾರಿಗಳು ರಕ್ತದಾನ ಮಾಡಿದರು.
ರಕ್ತದಾನ ಶಿಬಿರವನ್ನು ಕೇರಳ ಪೋಲೀಸರು ಮತ್ತು ಕೇರಳ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಜಂಟಿಯಾಗಿ ಆಯೋಜಿಸಿತ್ತು. ಎಡಿಜಿಪಿ ಕೆ ಪದ್ಮಕುಮಾರ್, ಡಿಐಜಿಪಿ ಪಿ ಪ್ರಕಾಶ್, ಎಸ್‍ಎಪಿ ಕಮಾಂಡೆಂಟ್ ಬಿ ಅಜಿತ್ ಕುಮಾರ್ ಮತ್ತು ಕೇರಳ ರಾಜ್ಯ ಏಡ್ಸ್ ಕಂಟ್ರೋಲ್ ಸೊಸೈಟಿ ಸಹಾಯಕ ನಿರ್ದೇಶಕ ಸಿನು ಕಡಕಂಪಲ್ಲಿ ಉಪಸ್ಥಿತರಿದ್ದರು.