ಕಳೆದ ಒಂದೂವರೆ ವರ್ಷಗಳಿಂದ ಜಗದಗಲ ಆವರಿಸಿರುವ ಕೋವಿಡ್ ಮಹಾಮಾರಿಯು ತಂದಿರುವ ಆಪತ್ತುಗಳ ಸರಮಾಲೆ ಕೊನೆ ಇಲ್ಲದ್ದು. ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬರುವ ಸೋಂಕು ಬಳಿಕ ಮತ್ತೆ-ಮತ್ತೆ ಅಡರುತ್ತಿರುವ ತೊಡರಿನಿಂದ ಜನಸಾಮಾನ್ಯರ ಜೀವನ ಸ್ಥಿರತೆ ಕಳಕೊಂಡಿರುವುದೂ ಹೌದು.
ಭಾರತದಂತಹ ಬಹುಸಂಸ್ಕೃತಿಯ ರಾಷ್ಟç ಈ ಮಹಾಮಾರಿಯನ್ನು ಎದುರಿಸಿದ ಉಪಕ್ರಮಗಳು ನಿಜಕ್ಕೂ ಸ್ತುತ್ಯರ್ಹವೆ. ಹಿಂದೆ ಗ್ರಹಿಸಿದಷ್ಟು ಸಾವು-ನೋವುಗಳು ಸಂಭವಿಸದಿದ್ದರೂ ಹಲವಾರು ಜನರು ಜೀವ-ಜೀವನ ಸಂಕಷ್ಟಕ್ಕೊಳಗಾಗಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕಾಗಿ ಹೇರುವ ಲಾಕ್ ಡೌನ್ ನಂತಹ ಕ್ರಮಗಳಿಂದ ಜನರು ಮನೆಯಿಂದ ಹೊರ ತೆರಳಲಾರದೆ ಏಕತಾನತೆಯತ್ತ ವಾಲಬೇಕಾದ ಸ್ಥಿತಿಯೂ ನಿರ್ಮಾಣವಾಗಿದೆ.
ಈ ನಿಟ್ಟಿನಲ್ಲಿ ನಮ್ಮ ಧಾರ್ಮಿಕ ನಂಬಿಕೆ, ಆಚರಣೆಗಳಲ್ಲೂ ಬದಲಾವಣೆಗಳಾಗಿದ್ದು, ಹಬ್ಬ-ಹರಿದಿನಗಳು, ಆಟ-ಆಯನ ಮೊಟಕುಗೊಂಡಿದೆ. ಮುಖ್ಯವಾಗಿ ದೇವಾಲಯಗಳ ಆಚರಣೆಗಳು, ದೈವ-ಭೂತದ ಕೋಲಗಳು ಸಂಪೂರ್ಣ ಆಚರಣಾ ರಹಿತವಾಗಿದೆ. ಇದರಿಂದಾಗಿ ದೈವ ವಿಶ್ವಾಸಿಗಳಲ್ಲಿ ಹಲವು ಗೊಂದಲ, ಸಂಶಯಗಳಿದ್ದು, ಈ ಬಗ್ಗೆ ಸಮರ್ಥರಿಂದ ನಿರ್ದೇಶನಗಳ ಅಗತ್ಯವಿರುವುದನ್ನು ಮನಗಂಡು ಶ್ರೀಶಂಕರ ಪೀಠಗಳಲ್ಲೇ ಅತ್ಯಂತ ಪ್ರಸಿದ್ದವಾದುವುಗಳಲ್ಲಿ ಒಂದಾದ ಕಾಸರಗೋಡು ಜಿಲ್ಲೆಯ ಶ್ರೀಮದ್ ಎಡನೀರು ಮಠಾಧೀಶರೊಂದಿಗೆ ಸಮರಸ ಸುದ್ದಿ ಆಯೋಜಿಸಿದ ಸಂವಾದ ವೀಕ್ಷಕರಿಗಾಗಿ ಈ ಮೂಲಕ ಪ್ರಸ್ತುತಪಡಿಸುತ್ತಿದ್ದೇವೆ. ವೀಕ್ಷಿಸಿ, ಪ್ರತಿಕ್ರಿಯಿಸಿ.
ಸಮರಸ ಸಂವಾದ-ಅತಿಥಿ: ಶ್ರೀಮದ್ ಎಡನೀರು ಮಠಾಧೀಶ ಶ್ರೀಶ್ರೀ ಸಚ್ಚಿದಾನಂದ ಭಾರತೀ ಕೋವಿಡ್ ಕಾಲಘಟ್ಟದ ಧಾರ್ಮಿಕ ನಂಬಿಕೆ, ಆಚರಣೆಗಳ ಸಮತೋಲನ
0
ಜೂನ್ 06, 2021
Tags