ಕೊಚ್ಚಿ: ತಾನು ಅಪರಾಧ ಮಾಡಿದೆ ಎಂದು ಹೇಳಿದ್ದಕ್ಕಾಗಿ ಯಾರಿಗೂ ಶಿಕ್ಷೆಯಾಗಬಾರದು ಎಂದು ಹೈಕೋರ್ಟ್ ಹೇಳಿದೆ. ವ್ಯಕ್ತಿಯೊಬ್ಬನಲ್ಲಿ ಅಪರಾಧ ಮಾಡಿದ್ದು ಹೌದೇ ಎಂಬ ಪ್ರಶ್ನೆಯನ್ನು ಕೇಳಿದಾಗ ಆತ ಹೌದೆಂದು ಒಪ್ಪಿದ ಮಾತ್ರಕ್ಕೆ ಆತ ಶಿಕ್ಷಾರ್ಹನಾಗಲಾರ ಎಂದು ಉಚ್ಚ ನ್ಯಾಯಾಲಯ ಬೊಟ್ಟುಮಾಡಿದೆ. ಪರಪ್ಪನಂಗಾಡಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಲಪ್ಪುರಂ ಅನಕ್ಕಾಯಂ ಮೂಲದ ರೇಸಿನ್ ಬಾಬು ಅವರ ಮೇಲಿನ ಶಿಕ್ಷೆಯನ್ನು ರದ್ದುಪಡಿಸಿ ಈ ತೀರ್ಪು ನೀಡಿದೆ.
ಪ್ರತಿವಾದಿಯನ್ನು ತಪ್ಪಿತಸ್ಥರೆಂದು ಪರಿಗಣಿಸಲು ನ್ಯಾಯಾಲಯ ಏಳು ನಿರ್ದೇಶನಗಳನ್ನು ವಿವರಿಸಿದೆ. ಆರೋಪಿತನ ಮೇಲೆ ಆರೋಪಗಳನ್ನು ಸ್ಪಷ್ಟಪಡಿಸಿ ನ್ಯಾಯ ವಿಭಾಗ(ಆರ್ಟಿಕಲ್ಸ್) ಉಲ್ಲೇಖಿಸಬೇಕು. ಅವುಗಳನ್ನು ಆರೋಪಿಗಳಿಗೆ ಕೇಳಿಸುವಂತೆ ಗಟ್ಟಿಯಾಗಿ ಓದಬೇಕು. ಆರೋಪಿಯು ಏನಾದರೂ ಅಪರಾಧ ಮಾಡಿದ್ದಾನೆಯೇ ಎಂದು ಕೇಳಬೇಕು. ಅಪರಾಧದ ಗಂಭೀರತೆಯನ್ನು ಅರಿತುಕೊಂಡ ಬಳಿಕ ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಚಾರ್ಜ್‍ಶೀಟ್‍ನಲ್ಲಿ ಹೇಳಬೇಕು.
ತಪ್ಪೊಪ್ಪಿಗೆಯನ್ನು ಪ್ರತಿವಾದಿಯ ಮಾತುಗಳಲ್ಲಿ ಸಾಧ್ಯವಾದಷ್ಟು ದಾಖಲಿಸಬೇಕು. ಈ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆಯೇ ಎಂದು ಮ್ಯಾಜಿಸ್ಟ್ರೇಟ್ ವಿವೇಚನೆಯಿಂದ ಪರಿಶೀಲಿಸಬೇಕು. ಇಂತಹ ಏಳು ಶಿಫಾರಸುಗಳನ್ನು ನ್ಯಾಯಾಲು ನಿರ್ದೇಶಸಿದೆ.
ಆರೋಪಿ ತಪ್ಪಿತಸ್ಥನೆಂದು ಕಂಡುಕೊಳ್ಳಲು ವಿಚಾರಣಾ ನ್ಯಾಯಾಲಯ ಕೈಗೊಂಡ ಕ್ರಮಗಳನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿರುವುದನ್ನು ನ್ಯಾಯಾಲಯ ಗಮನಿಸಿದೆ. ಈ ಪ್ರಕರಣವು 2017 ರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ, ನ್ಯಾಯಾಲಯವು ಪ್ರತಿವಾದಿಯು ತಪ್ಪಿತಸ್ಥನೆಂದು ಒಪ್ಪಿಕೊಂಡಿಲ್ಲ ಎಂದು ತೀರ್ಪು ನೀಡಿತು. ಈ ಪ್ರಕರಣವನ್ನು ನ್ಯಾಯಮೂರ್ತಿ ವಿ.ಜಿ.ಅರುಣ್ ವಿಚಾರಣೆ ನಡೆಸಿದ್ದರು.