ಮುಳ್ಳೇರಿಯ: ಕಾರಡ್ಕ ಜಿ.ವಿ.ಎಚ್.ಎಸ್.ಎಸ್ ಶಾಲೆಯ 2021 - 22 ಶೈಕ್ಷಣಿಕ ವರ್ಷಕ್ಕೆ ಪ್ರವೇಶೋತ್ಸವ ಸಮಾರಂಭವನ್ನು ಗೂಗಲ್ ಮೀಟ್ ಮೂಲಕ ನಡೆಸಲಾಯಿತು. ಸಭೆಯು ಸಮಾಜಶಾಸ್ತ್ರ ಶಿಕ್ಷಕ ಸತೀಶನ್ ಬಿ ಅವರ ಪ್ರಾರ್ಥನಾ ಹಾಡಿನೊಂದಿಗೆ ಪ್ರಾರಂಭವಾಯಿತು. ಪಿಟಿಎ ಅಧ್ಯಕ್ಷ ಮೋಹನನ್ ಕಾರಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ ಪ್ರವೇಶ ಸಮಾರಂಭವನ್ನು ಉದ್ಘಾಟಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ, ವಕೀಲ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲೆಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಪ್ರವೇಶ ಸಮಾರಂಭದಲ್ಲಿ ಭಾಗವಹಿಸಿದ್ದರು. ಶಾಲಾ ಮಟ್ಟದ ಪ್ರವೇಶ ಸಮಾರಂಭದ ಬಳಿಕ ಒಂದರಿಂದ ಹತ್ತನೇ ತರಗತಿಗಳಲ್ಲಿನ ಮಕ್ಕಳಿಗೆ ತರಗತಿ ಪ್ರವೇಶ ಸಮಾರಂಭವನ್ನು ಆಯೋಜಿಸಲಾಗಿತ್ತು. ಪ್ರವೇಶೋತ್ಸವ ಸಮಾರಂಭದ ನೆನಪಿಗಾಗಿ ಮಕ್ಕಳು ತಮ್ಮ ಮನೆಗಳಲ್ಲಿ ಕಾಡು ಮಾವಿನ ಗಿಡ ನೆಟ್ಟು, ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ಮನೆಯ ಉತ್ಸವವನ್ನಾಗಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಪಿ.ಬಿ.ಶಫೀಕ್ ಕಾರಡ್ಕ, ಗ್ರಾಮ ಪಂಚಾಯತಿ ಸದಸ್ಯರಾದ ಪ್ರಜೀಜಾ ಎ, ರೂಪಾ ಸತ್ಯನ್, ಪ್ರಾಂಶುಪಾಲ ಮೀರಾ ಜೋಸ್, ಹಿರಿಯ ಶಿಕ್ಷಕಿ ಚಂದ್ರಿಕಾ ಎಂ, ಎಸ್‍ಎಂಸಿ ಅಧ್ಯಕ್ಷ ತಂಬಾನ್ ಕೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಶಿಕ್ಷಕ ಕರುಣಾಕÀರ ಎಂ ಅವರು ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಕುಞಂಬು ಅವರು ವಂದಿಸಿದರು.