ಗುರುವಾಯೂರ್: ಗುರುವಾಯೂರ್ ನಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆಡಳಿತಾಧಿಕಾರಿ ಟಿ. ಬ್ರಿಜಕುಮಾರಿ ವಿವಾದಕ್ಕೆಡೆಯಾಗಿರುವರು. ರಾತ್ರಿ ಪಾಳಿಯ ಬಳಿಕ ನಡೆದ ತ್ರಿಪುಕಾ ಪೂಜೆಯ ಸಂದರ್ಭದಲ್ಲಿ ನಿರ್ವಾಹಕರು ನಾಲಂಂಬಲಂ ಪ್ರವೇಶಿಸುವ ಮೂಲಕ ಪದ್ಧತಿಯನ್ನು ಉಲ್ಲಂಘಿಸಿದ್ದಾರೆ. ಗುರುವಾರ ರಾತ್ರಿ, ನಿರ್ವಾಹಕರು ಮತ್ತು ಇತರರೊಂದಿಗೆ, ತ್ರಿಪುಕಾ ಪೂಜೆಯ ಸಮಯದಲ್ಲಿ ನಾಲಂಬಲಂ ಒಳಗೆ ಪ್ರವೇಶಿಸಿ ವಾಡಿಕೆಯ ಆಚರಣೆಗಳನ್ನು ಗಾಳಿಗೆ ತೂರಿರುವುದಾಗಿ ಆರೋಪಗಳೆದ್ದಿದೆ.
ರಾತ್ರಿ ಪೂಜೆಯ ಬಳಿಕ ಶಾಂತಿ ತಿಡಂಬುಗಳೊಂದಿಗೆ ಗರ್ಭಗೃಹದೊಳಗೆ ನಡೆಸುವ ಪೂಜಾದಿಗಳ ಆಚರಣೆ ತ್ರಿಪುಕಾ ಕ್ರಮಗಳಾಗಿವೆ. ಈ ಸಮಯದಲ್ಲಿ, ದೇವಾಲಯದ ಕೆಲಸಗಾರರು ಮತ್ತು ಕರ್ತವ್ಯದಲ್ಲಿರುವ ಸಿಬ್ಬಂದಿ ಮಾತ್ರ ಅಂಗಣದೊಳÀಗೆ ಪ್ರವೇಶವನ್ನು ಹೊಂದಿದ್ದಾರೆ. ಈ ಹಿಂದೆ ಆಡಳಿತ ಮಂಡಳಿಯು ದೇವಾಲಯದ ತಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಈ ವೇಳೆ ನಾಲಂಬಲಂ ಪ್ರವೇಶಿಸಿರುವ ಬಗ್ಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ನಿರ್ವಾಹಕರು ಪೆÇ್ರೀಟೋಕಾಲ್ ಉಲ್ಲಂಘನೆ ನಡೆಸಿರುವುದು ಪ್ರತಿಭಟನೆಗೆ ಕಾರಣವಾಗಿದೆ.
ಕೊರೋನಾದ ಮಾನದಂಡಗಳ ಪ್ರಕಾರ, ಹೊರಗಿನವರು, ವೃತ್ತಿಯಲ್ಲಿರದ ಪರಂಪರೆಯ ಮನೆತನದವರಿಗೆ ಮತ್ತು ಕರ್ತವ್ಯೇತರ ನೌಕರರು ಸಹ ಅಂಗಣದೊಳಗೆ ಪ್ರವೇಶ ನಿರಾಕರಿಸಲಾಗಿದೆ. ನಿರ್ವಾಹಕರು ಮತ್ತು ಅವರ ಸಹ ಅಧಿಕಾರಿಗಳು ಈ ಕಾನೂನನ್ನು ದುರುಪಯೋಗಪಡಿಸಿಕೊಂಡರು. ಭದ್ರತಾ ಸಿಬ್ಬಂದಿ ಉಲ್ಲಂಘನೆಯ ಬಗ್ಗೆ ಎಚ್ಚರಿಕೆ ನೀಡಿದರೂ, ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ವಿಶೇಷ ದಿನಗಳಲ್ಲಿ ಸಹ, ಅಂಗಣದೊಳಗೆ ಅನುಮತಿಸದವರನ್ನು ರಾತ್ರಿಯ ತ್ರಿಪುಕಾ ಪೂಜೆಯ ವೇಳೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಬ್ರೀಜಾ ಕುಮಾರಿ ಮಾಜಿ ಸಿಪಿಎಂ ಪಂಚಾಯತ್ ಅಧ್ಯಕ್ಷರ ಪುತ್ರಿ. ಅವರೊಂದಿಗೆ ಇದ್ದ ಗುಂಪಿನಲ್ಲಿ ವ್ಯಾಪಾರ ಮುಖಂಡರು ಸೇರಿದ್ದಾರೆ ಎಂಬ ಸೂಚನೆಗಳಿವೆ. ಘಟನೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.