ತಿರುವನಂತಪುರ: ರಾಜ್ಯದಲ್ಲಿ ಅರಣ್ಯ ಲೂಟಿ ತಡೆಯಲು ರೂಪುಗೊಂಡ ಅರಣ್ಯ ಗುಪ್ತಚರ ನಿಷ್ಕ್ರಿಯವಾಗಿದೆ. ಇದನ್ನು ಅರಣ್ಯ ಇಲಾಖೆಯೇ ಒಪ್ಪಿಕೊಂಡಿರುವ ಬಗ್ಗೆ ತಿಳಿದುಬಂದಿದೆ. ವಯನಾಡ್ ಜಿಲ್ಲೆಯಲ್ಲಿ ಅರಣ್ಯ ಗುಪ್ತಚರ ಕಾರ್ಯವು ಪರಿಣಾಮಕಾರಿಯಾಗಿಲ್ಲ ಎಂದು ಅರಣ್ಯ ಇಲಾಖೆಯ ಉಪ ನಿರ್ದೇಶಕರು ಸ್ವತಃ ಹೇಳಿಕೆ ನೀಡಿರುವರು. ಕಳೆದ ಮಾರ್ಚ್ ನಲ್ಲಿ ಕರ್ತವ್ಯ ಲೋಪವೆಸಗಿದ ಕೆಲವು ಅಧಿಕಾರಿಗಳನ್ನು ತೆಗೆದುಹಾಕಲು ಸರ್ಕಾರ ಆದೇಶಿಸಿತ್ತು. ಇದರ ಬೆನ್ನಿಗೇ ವಯನಾಡ್ ನ ಅರಣ್ಯ ಲೂಟಿ ಗಮನಕ್ಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಅರಣ್ಯ ಲೂಟಿಯನ್ನು ತಡೆಗಟ್ಟುವ ಉದ್ದೇಶದಿಂದ ಪೋಲೀಸರ ಮಾದರಿಯಲ್ಲಿ ಅರಣ್ಯ ಇಲಾಖೆಯಲ್ಲಿ ಗುಪ್ತಚರ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಅರಣ್ಯ ಇಲಾಖೆಗೆ ಬೆನ್ನೆಲುಬಾಗಿ ಸಮಯೋಚಿತವಾಗಿ ಅಕ್ರಮ, ಲೋಪಗಳನ್ನು ಪತ್ತೆಹಚ್ಚಿ ವರದಿ ಮಾಡುವ ಕಾರ್ಯವನ್ನು ನಿರ್ವಹಿಸಿತ್ತು. ಆದರೆ, ಅರಣ್ಯ ಲೂಟಿ ವಿಪರೀತವಾಗಿರುವ ವಯನಾಡ್ ಜಿಲ್ಲೆಯಲ್ಲೂ ಗುಪ್ತಚರ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅರಣ್ಯ ಇಲಾಖೆಯೇ ಒಪ್ಪಿಕೊಂಡಿದೆ.
ವಯನಾಡ್ ಜಿಲ್ಲೆಯಲ್ಲಿ ಇಂತಹ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾ ಉಪ ಮುಖ್ಯ ಅರಣ್ಯ ಅಧಿಕಾರಿ ಕಳೆದ ಮಾರ್ಚ್ 20 ರಂದು ಪತ್ರವೊಂದನ್ನು ನೀಡಿದ್ದರು. ಕೆಲವು ಉದ್ಯೋಗಿಗಳ ವರ್ಗಾವಣೆಗೆ ಸಂಬಂಧಿಸಿದ ಸೂಚನೆಗಳ ಪತ್ರದಂತೆ ಆದೇಶ ಹೊರಡಿಸಲು ಸರ್ಕಾರ ವಿಳಂಬ ಗತಿ ಅನುಸರಿಸಿತು. ಅರಣ್ಯ ಗುಪ್ತಚರ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದಿರುವುದು ಈ ಆದೇಶದ ಹಿಂದಿನ ಕಾರಣ ಎಂದು ಸರ್ಕಾರ ಬಹಿರಂಗವಾಗಿ ಒಪ್ಪಿಕೊಳ್ಳುತ್ತದೆ.
ಹೆಚ್ಚಿನ ಅರಣ್ಯನಾಶ ವರದಿಯಾದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪರಿಸ್ಥಿತಿ ಇದೇ ರೀತಿ ಇದೆ. ಇದಲ್ಲದೆ, ಅರಣ್ಯ ಲೂಟಿಯಲ್ಲಿ ತೊಡಗಿರುವ ಮತ್ತು ಉನ್ನತ ಹುದ್ದೆಗಳಿಗೆ ಬಡ್ತಿ ಪಡೆಯುತ್ತಿರುವ ಅಧಿಕಾರಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.