ತಿರುವನಂತಪುರ: ಪ್ರಕರಣದಲ್ಲಿ ದೂರು ದಾಖಲಾಗಿರುವ ವಾಹನಗಳು ಪೋಲೀಸ್ ಠಾಣೆಗಳ ಪರಿಸರದಲ್ಲಿ ಜಮೆಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಅವರು ಪೋಲೀಸ್ ಠಾಣೆಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಮತ್ತು ಹತ್ತಿರದ ರಸ್ತೆಗಳಲ್ಲಿ ವಿವಿಧ ಪ್ರಕರಣ ಸಂಬಂಧಿ ದೂರು ದಾಖಲಾಗಿ ನಿಲುಗಡೆಗೊಳಿಸಿರುವ ಮುಟ್ಟುಗೋಲು ಹಾಕಲಾದ ವಾಹನಗಳನ್ನು ನಿಲ್ಲಿಸದಿರುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಪ್ರಮುಖ ಹೆದ್ದಾರಿಗಳ ಬದಿಯಲ್ಲಿರುವ ಪೋಲೀಸರು ವಶಪಡಿಸಿಕೊಂಡ ಬಸ್ಸುಗಳು ಸೇರಿದಂತೆ ವಾಹನಗಳ ನಿಲುಗಡೆ ಸಾರ್ವಜನಿಕರಿಗೆ ಬಹಳ ಕಷ್ಟಕರವಾಗಿದೆ. ಸಾರ್ವಜನಿಕ ಪ್ರದೇಶಗಳು ಅಪರಾಧದ ತಾಣವಾಗಿ ಮಾರ್ಪಡುತ್ತಿದೆ. ಲೋಕೋಪಯೋಗಿ ಸಚಿವರು ಈ ವಿಷಯವನ್ನು ರಾಜ್ಯ ಪೋಲೀಸ್ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಅಂತಹ ವಾಹನಗಳನ್ನು ಒಂದು ತಿಂಗಳೊಳಗೆ ವಿಲೇವಾರಿಗೊಳಿಸುವಂತೆ ಸ್ಟೇಷನ್ ಹೌಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪೋಲೀಸ್ ಠಾಣೆ ಸುತ್ತಮುತ್ತ ವಾಹನಗಳು ದಟ್ಟಣೆಗೊಳ್ಳಲು ಇನ್ನು ಅನುಮತಿಸುವುದಿಲ್ಲ. ಇದನ್ನು ಖಾತರಿಪಡಿಸುವ ಜವಾಬ್ದಾರಿ ಜಿಲ್ಲಾ ಪೋಲೀಸ್ ಮುಖ್ಯಸ್ಥರು ಮತ್ತು ವಲಯ ಡಿಐಜಿಗಳ ಮೇಲಿದೆ. ವಾಹನಗಳನ್ನು ಅನಗತ್ಯವಾಗಿ ವಶಕ್ಕೆ ತೆಗೆದುಕೊಳ್ಳಬಾರದು. ಕಾನೂನು ಕ್ರಮ ಕೈಗೊಂಡ ಕೂಡಲೇ ಅಂತಹ ವಾಹನಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮಾರ್ಗಸೂಚಿ ತಿಳಿಸಿದೆ.
ವಾಹನಗಳನ್ನು ಬಿಡುಗಡೆ ಮಾಡಲು ಕಾನೂನು ಸಮಸ್ಯೆ ಇದ್ದರೆ, ಅವರು ಕಂದಾಯ ಅಧಿಕಾರಿಗಳ ಸಹಾಯದಿಂದ ಸ್ಥಳವನ್ನು ಕಂಡುಕೊಳ್ಳಬೇಕು ಮತ್ತು ಅವುಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕು. ಈ ಮಾದರಿಯನ್ನು ಕೋಝಿಕೋಡ್ ನಗರದಲ್ಲಿ ಜಿಲ್ಲಾಧಿಕಾರಿ ಸಹಾಯದಿಂದ ಜಾರಿಗೆ ತರಲಾಗುತ್ತಿದೆ.
ಎಲ್ಲಾ ಪೋಲೀಸ್ ಠಾಣೆಗಳ ಸಮೀಪ ರಸ್ತೆಗಳಲ್ಲಿ ನಿಲ್ಲಿಸಿರುವ ಇಂತಹ ವಾಹನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋಗೆ ಸೂಚನೆ ನೀಡಲಾಗಿದೆ.