ಅತಿಥಿ: ರಾಧಾಕೃಷ್ಣ ಕೆ.ಉಳಿಯತ್ತಡ್ಕ
ಗಡಿನಾಡು ಕಾಸರಗೋಡಿನ ಸಮಗ್ರ ಕನ್ನಡ ಇತಿಹಾಸದಲ್ಲಿ ವೈವಿಧ್ಯಮಯ ಸಾಧನೆಗಳ ಮೂಲಕ ಗುರುತಿಸಿ ಮರೆಯಾದರೂ, ಮರೆಯಲಾರದ ಮಹಾನ್ ಚೇತನ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಗಳು. ಕನ್ನಡ ಹೋರಾಟ, ಸಾಹಿತ್ಯ, ರಾಜಕೀಯ, ಕೃಷಿ, ಅಧ್ಯಾಪನ, ಪತ್ರಿಕೋದ್ಯಮ ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಮಹಾನ್ ಸೇವೆ ಮಾಡಿದ ಕಯ್ಯಾರರು ಜನಿಸಿದ್ದು ಜೂ.೦೮ ರಂದು.
ಮಹಾನ್ ಚೇತನಗಳ ಹುಟ್ಟಿಗೆ ಮತ್ತು ಅವರ ಹುಟ್ಟಿನ ಘಳಿಗೆಗಳಿಗೆ ವಿಶೆಷವಾದ ಮಹತ್ವ ಇದ್ದೇ ಇದೆ. ಇದು ಕೇವ ನಂಬಿಕೆ ಅಲ್ಲ. ಅದರಾಚೆಗಿನ ಪತ್ತೆ ಇರದ ವಿಜ್ಞಾನ ಇದೆ ಎಂಬುದನ್ನು ಈಗಾಗಲೇ ಹಲವು ದಾರ್ಶನಿಕರ ಬದುಕಿಂದ ತಿಳಿಯಲಾಗಿದೆ.
ಮರೆಯಾದರೂ, ಮರೆಯಲಾಗದ ಮತ್ತು ಮರೆಯಬಾರದ ಕಯ್ಯಾರರ ಬದುಕು, ಹೋರಾಟ, ಬರಹಗಳ ಬಗ್ಗೆ ಕಯ್ಯಾರರ ಶಿಷ್ಯ, ಸಾಹಿತಿ, ಬರಹಗಾರ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರೊಂದಿಗೆ ಸಮರಸ ಸುದ್ದಿ ಯುವ ತಲೆಮಾರನ್ನು ದೃಷ್ಟಿಯಲ್ಲಿರಿಸಿ ನಡೆಸಿದ ಸಂದರ್ಶನ ಆಯ್ದ ಭಾಗ ಇಲ್ಲದೆ.
ವೀಕ್ಷಿಸಿ, ಇತರರಿಗೂ ಹಂಚಿ, ಪ್ರೋತ್ಸಾಹಿಸಿ.
ಕಾಯಕ ಯೋಗಿಗೆ ನಮನಗಳೊಂದಿಗೆ
ಸಮರಸ ಸಂವಾದ: ವಿಶೇಷ ಸಂದರ್ಶನ: ಕನ್ನಡದ ಕವಿ ಮತ್ತು ಕಲಿ ಕಯ್ಯಾರ ಕಿಂಞಣ್ಣ ರೈಗಳ ಜನ್ಮ ದಿನದ ನಿಮಿತ್ತ
0
ಜೂನ್ 08, 2021
Tags