ತಿರುವನಂತಪುರ: ಕೈಗಾರಿಕಾ ಸಚಿವ ಪಿ ರಾಜೀವ್ ಅವರಿಗೆ ಕೊರೋನಾ ದೃಢಪಡಿಸಲಾಗಿದೆ. ಅವರು ನಿನ್ನೆ ವಿಧಾನಸಭೆಯಲ್ಲಿ ಭಾಗವಹಿಸಿದ್ದರು. ರಾಜೀವ್ ಅವರು ಮುಖ್ಯಮಂತ್ರಿ ಮತ್ತು ಕ್ಯಾಬಿನೆಟ್ ನ ಇತರ ಸದಸ್ಯರೊಂದಿಗೆ ನಿಕಟ ಸಂವಾದ ನಡೆಸಿದ್ದರು.
ರಾಜೀವ್ ಅವರನ್ನು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವರು ಇತ್ತೀಚಿನ ದಿನಗಳಲ್ಲಿ ಕಳಮಸ್ಸೇರಿ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಾಗಿಸಿದ್ದರು. ವಿಪತ್ತು ಪರಿಹಾರ ನಿಧಿ ಮತ್ತು ರಕ್ಷಣಾ ಸಲಕರಣೆಗಳ ವಿತರಣೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದರು.
ಏತನ್ಮಧ್ಯೆ, ಅರುವಿಕ್ಕರ ಶಾಸಕ ಸ್ಟೀಫನ್ ಅನಾರೋಗ್ಯದ ಕಾರಣ ತಿರುವನಂತಪುರ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದರು.