ಬದಿಯಡ್ಕ: ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್(ಕೆ.ಎಸ್.ಟಿ.ಎ) ವತಿಯಿಂದ ಗುರು ಸ್ಪರ್ಶ_ 2 ಕಾರುಣ್ಯ ಚಟುವಟಿಕೆಯ ಭಾಗವಾಗಿ ಕುಂಬಳೆ ಉಪಜಿಲ್ಲಾ ವತಿಯಿಂದ ಉಕ್ಕಿನಡ್ಕ ವೈದ್ಯಕೀಯ ಕಾಲೇಜಿಗೆ ಜೀವ ಸುರಕ್ಷಾ ಔಷಧ ಕಿಟ್ ನ್ನು ಹಸ್ತಾಂತರಿಸಲಾಯಿತು.
ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ವೈದ್ಯಕೀಯ ಕಾಲೇಜ್ ಸುಪರಿಡೆಂಟ್ ಗೆ ಹಸ್ತಾಂತರಿಸಿ ಉದ್ಘಾಟಿಸಿದರು.. ಕುಂಬಳೆ ಉಪಜಿಲ್ಲಾ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆಎಸ್, ಕೆ.ಪಿ.ಎಸ್.ಟಿ.ಎ ರಾಜ್ಯ ಸಮಿತಿ ಸದಸ್ಯ ಯೂಸುಫ್ ಮಾಸ್ತರ್, ಜಿಲ್ಲಾ ಕೋಶಾಧಿಕಾರಿ ಪ್ರಶಾಂತ್ ಕಾನತ್ತೂರು, ವಿದ್ಯಾಭ್ಯಾಸ ಜಿಲ್ಲಾ ಕೋಶಾಧಿಕಾರಿ ಗೋಪಾಲಕೃಷ್ಣನ್, ಬದಿಯಡ್ಕ ಮಂಡಲ ಅಧ್ಯಕ್ಷ ಎನ್ ನಾರಾಯಣನ್, ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್ ಎಮ್,ಮಾಜಿ ಅಧ್ಯಕ್ಷ ಮಾಹೀನ್ ಕೆಳೊಟ್,ಕೃಷ್ಣನ್ ಸಿಪಿಕೆ, ಶರತ್ ಚಂದ್ರ ಶೆಟ್ಟಿ ಮಾತನಾಡಿದರು.
ಕುಂಬಳೆ ಉಪಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಸ್ವಾಗತಿಸಿ, ಕೋಶಾಧಿಕಾರಿ ನಿರಂಜನ್ ರೈ ಪೆರಡಾಲ ವಂದಿಸಿದರು, ಮುಂದಿನ ಹಂತವಾಗಿ ಕುಂಬಳೆ ಉಪಜಿಲ್ಲಾ ಪಂಚಾಯತಿನ ಆರೋಗ್ಯ ಕೇಂದ್ರಗಳಿಗೆ ಮಡಿಕಲ್ ಕಿಟ್ ಹಸ್ತಾಂತರಿಸಲು ತೀರ್ಮಾನಿಸಲಾಯಿತು.