HEALTH TIPS

ಲಕ್ಷದ್ವೀಪದ ಕಾನೂನು ವ್ಯಾಪ್ತಿಯನ್ನು ಕೇರಳ ಹೈಕೋರ್ಟ್‌ ನಿಂದ ಕರ್ನಾಟಕಕ್ಕೆ ಬದಲಾಯಿಸಲು ಆಡಳಿತದಿಂದ ಪ್ರಸ್ತಾವ

        ಕೊಚ್ಚಿ: ಲಕ್ಷದ್ವೀಪದಲ್ಲಿ ನೂತನ ಆಡಳಿತಾಧಿಕಾರಿಯಾಗಿ ಪ್ರಫುಲ್‌ ಖೋಡಾ ಪಟೇಲ್‌ ನೇಮಕವಾದ ಬಳಿಕ ನೂತನ ನಿಯಮಗಳ ಜಾರಿಯನ್ನು ವಿರೋಧಿಸಿ ಲಕ್ಷದ್ವೀಪದಾದ್ಯಂತ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಲಕ್ಷದ್ವೀಪದ ನ್ಯಾಯಾಂಗ ವ್ಯಾಪ್ತಿಯನ್ನು ಕೇರಳ ಹೈಕೋರ್ಟ್‌ ನ ಬದಲು ಕರ್ನಾಟಕ ಹೈಕೋರ್ಟ್‌ ಗೆ ವರ್ಗಾಯಿಸುವಂತೆ ಆಡಳಿತವು ಪ್ರಸ್ತಾವ ರೂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

        ದ್ವೀಪದ ನೂತನ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕ ಪ್ರಫುಲ್‌ ಪಟೇಲ್‌ ಕೈಗೊಂಡ ನಿರ್ಧಾರಗಳ ಬಗ್ಗೆ ಕೇರಳ ಹೈಕೋರ್ಟ್‌ ಗೆ ದಾವೆಗಳು ಸಲ್ಲಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆಡಳಿತ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

           ದ್ವೀಪದಲ್ಲಿನ ಕೋವಿಡ್‌ ನಿಯಮಗಳು ಹಾಗೂ ಕಾರ್ಯಾಚರಣಾ ವಿಧಾನಗಳಲ್ಲಿನ ಬದಲಾವಣೆ, ಮೀನುಗಾರರ ಗುಡಿಸಲುಗಳನ್ನು ನೆಲಸಮ ಮಾಡುವುದು ಹಾಗೂ ಗೂಂಡಾ ಕಾಯ್ದೆಯನ್ನು ಜಾರಿಗೆ ತರುವುದು ಮುಂತಾದ ನಿರ್ಧಾರಗಳ ವಿರುದ್ಧ ಆಡಳಿತಾಧಿಕಾರಿಯು ವಿರೋಧ ಎದುರಿಸುತ್ತಿದ್ದಾರೆ.

        ಈ ಹಿಂದೆ ದಾಮನ್‌ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗುದ್ದ ಖೋಡಾ ಪಟೇಲ್‌ ಕಳೆದ ಡಿಸೆಂಬರ್‌ ನ ಮೊದಲ ವಾರದಲ್ಲಿ ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

             ಕೇರಳ ಹೈಕೋರ್ಟ್‌ ನಲ್ಲಿ ಈ ವರೆಗೆ 11 ರಿಟ್‌ ಅರ್ಜಿಗಳು ಸೇರಿದಂತೆ ಒಟ್ಟು 23 ಅರ್ಜಿಗಳು ದಾಖಲಾಗಿವೆ. ಲಕ್ಷದ್ವೀಪದ ಆಡಳಿತಾಧಿಕಾರಿಗಳ, ನಿರ್ವಾಹಕರ, ಪೊಲೀಸರ ಮತ್ತು ಸ್ಥಳೀಯ ಸರಕಾರದ ವಿರುದ್ಧದ ದೂರುಗಳೂ ಸೇರಿವೆ ಎಂದು ತಿಳಿದು ಬಂದಿದೆ.

          "ಇದು ಪ್ರಫುಲ್‌ ಪಟೇಲ್‌ ರ ಮೊದಲ ಪ್ರಯತ್ನವಾಗಿದೆ. ಇದುವರೆಗೆ ಲಕ್ಷದ್ವೀಪದಲ್ಲಿ ೩೬ ಮಂದಿ ಆಡಳಿತಾಧಿಕಾರಿಗಳು ಆಡಳಿತ ನಡೆಸಿದ್ದಾರೆ. ಯಾರೂ ಇಂತಹಾ ಪ್ರಯತ್ನಕ್ಕೆ ಕೈಹಾಕಿಲ್ಲ. ನಮ್ಮ ಮಾತೃಭಾಷೆ ಮಳಯಾಲಂ ಆಗಿದೆ. ಹಾಗಿರುವಾಗ ಈ ಬದಲಾವಣೆಯೇಕೆ? ಕೇರಳ ಹೈಕೋರ್ಟ್‌ 400ಕಿಮೀ ದೂರವಿದ್ದರೆ, ಕರ್ನಾಟಕ ಹೈಕೋರ್ಟ್‌ ಸಾವಿರಕ್ಕೂ ಹೆಚ್ಚು ಕಿಲೋಮೀಟರ್‌ ದೂರದಲ್ಲಿದೆ. ಅಲ್ಲಿಗೆ ತೆರಳಳು ಸರಿಯಾದ ವ್ಯವಸ್ಥೆಗಳೂ ಇಲ್ಲ. ಇದನ್ನು ನಾವು ವಿರೋಧಿಸುತ್ತೇವೆ" ಎಂದು ಸಂಸದ ಮುಹಮ್ಮದ್‌ ಫೈಸಲ್‌ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries