HEALTH TIPS

ಮಕ್ಕಳಲ್ಲಿ ಕೊರೊನಾ ಅಪಾಯ ಹೆಚ್ಚಾಗಲು ಅತಿಯಾದ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರವೂ ಒಂದು ಕಾರಣನಾ? ತಜ್ಞರು ಏನೆನ್ನುತ್ತಾರೆ ?

Top Post Ad

Click to join Samarasasudhi Official Whatsapp Group

Qries

Qries

          ಕೊರೊನಾ ಎರಡನೇ ಅಲೆ ಹಿಡಿತಕ್ಕೆ ಬರುತ್ತಿದ್ದಂತೆಯೇ, ಮುಂದಿನ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಅದರಲ್ಲೂ ಮಕ್ಕಳು ಮುಂದಿನ ಅಲೆಗೆ ಹೆಚ್ಚು ತುತ್ತಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಕೊರೊನಾದಿಂದ ಪಾರಾಗಲು ಬಳಸುವ ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳೇ ಮಕ್ಕಳನ್ನ ಕೊರೊನಾಗೆ ಹೆಚ್ಚು ತುತ್ತಾಗುವಂತೆ ಮಾಡುವುದು ಎಂಬ ಅಘಾತಕಾರಿ ಮಾಹಿತಿಯನ್ನು ತಜ್ಞರು ಹೇಳುತ್ತಿದ್ದಾರೆ. ಹಾಗಾದರೆ ಅದರಲ್ಲಿರುವ ಹೇಳಿರುವ ವಿಚಾರವೇನು ಎಂಬುದನ್ನು ಇಲ್ಲಿ ನೋಡೋಣ.

          ಮಕ್ಕಳಲ್ಲಿ ಸಹಜವಾದ ರೋಗನಿರೋಧಕ ಶಕ್ತಿ ಇದ್ದು, ಈ ರೀತಿಯ ಸೋಂಕುಗಳ ವಿರುದ್ಧ ಹೋರಾಡಬಲ್ಲ ಶಕ್ತಿ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಕೊರೊನಾದ ತೀವ್ರತೆ ಹೆಚ್ಚಾಗಲು ಅತಿಯಾದ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರವೂ ಒಂದು ಕಾರಣವಾಗಬಹುದು ಎಂಬುದು ಕೆಲವು ತಜ್ಞರು ದೂಷಿಸುತ್ತಿದ್ದಾರೆ.

                 ಮಾಸ್ಕ್ ಗಳನ್ನು ಹಾಕುವುದು, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಜೊತೆಗೆ ಕೊರೊನಾ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುವುದು ಲಸಿಕೆ ಹಾಕಿಕೊಂಡ ಬಳಿಕವೂ ಅಪಾಯವನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು. ಆದಾಗ್ಯೂ, ಜಾಗತಿಕ ಮಟ್ಟದ ತಜ್ಞರ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಮಾಸ್ಕ್ ಹಾಗೂ ಸಾಮಾಜಿಕ ಅಂತರದ ನಡುವೆಯೂ ಈ ವರ್ಷ ಮಕ್ಕಳು ಕೊರೊನಾಗೆ ತುತ್ತಾಗಿರುವ ಸಂಖ್ಯೆ ಹೆಚ್ಚಾಗಿದ್ದು, ಜೊತೆಗೆ ಈ ಕ್ರಮಗಳು ಮಕ್ಕಳಲ್ಲಿ ಇತರ ಉಸಿರಾಟದ ಸೋಂಕುಗಳ ಏರಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ತಜ್ಞರ ಪ್ರಕಾರ, ಹೆಚ್ಚಿನ ಸಾಮಾಜಿಕ ಅಂತರ ಮತ್ತು ತಡೆಗಟ್ಟುವ ಕ್ರಮಗಳು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು. ಅವರು ಒಳಗೇ ಇದ್ದುದರಿಂದ ಮಕ್ಕಳ ಇಮ್ಯುನಿಟಿ ಶಕ್ತಿ ಕಡಿಮೆಯಾಗಬಹುದು. ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಜಿಪಿಎಸ್ (ಆರ್‌ಸಿಜಿಪಿ) ಮೂಲದ ಸಂಶೋಧನಾ ತಂಡವು ನಡೆಸಿದ ಈ ಅಧ್ಯಯನವು ಅತಿಯಾದ ಮುಂಜಾಗ್ರತಾ ಕ್ರಮಗಳಿಂದಾಗಿ ವೈರಸ್‌ಗಳು ಮತ್ತು ರೋಗಕಾರಕಗಳಿಗೆ ತುತ್ತಾಗದ ಸಣ್ಣ ಮಕ್ಕಳೇ ಹೆಚ್ಚಿನ ಕೊರೊನಾ ಅಪಾಯಕ್ಕೆ ಒಳಗಾಗಿರುವುದು ಎಂದು ತಿಳಿಸಿದೆ. ವೈಜ್ಞಾನಿಕವಾಗಿ, ರೋಗಕಾರಕಗಳು ಮತ್ತು ಸೋಂಕುಗಳ ಸಂಪರ್ಕಕ್ಕೆ ಮಕ್ಕಳು ನಿಯಮಿತವಾಗಿ ಬರಬೇಕು. ಇವು ಮಕ್ಕಳಲ್ಲಿ ಕಾಯಿಲೆಗೆ ಕಾರಣವಾಗದಿದ್ದರೂ, ರೋಗಗಳ ವಿರುದ್ಧ ಸಾಕಷ್ಟು, ರಕ್ಷಣಾತ್ಮಕ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಈಗಿರುವ ಕ್ರಮಗಳು ಜ್ವರ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುತ್ತವೆಯಾದರೂ, ದುರದೃಷ್ಟವಶಾತ್ ಉಸಿರಾಟದ ಸಿನ್ಸಿಟಿಯಲ್ ವೈರಸ್ (ಆರ್‌ಎಸ್‌ವಿ) ನಂತಹ ಇತರ ವೈರಸ್‌ನಂತಹ ಗಂಭೀರ ಶ್ವಾಸಕೋಶದ ಸೋಂಕುಗಳನ್ನು ಸಣ್ಣ ಮಕ್ಕಳಲ್ಲಿ ಉಂಟುಮಾಡಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
                  ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆಯೇ?: ದೇಶದಲ್ಲಿ ಕೊರೊನಾದ ಎರಡನೇ ಅಲೆಯಲ್ಲಿ ಮಕ್ಕಳು ತುತ್ತಾಗುವ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ಕಂಡುಬಂದಿದೆ. ಕೆಲವರ ಪ್ರಕಾರ, ಮೂರನೇ ಅಲೆಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಆದರೆ ಅಪಾಯದ ಪ್ರಮಾಣ ಕಡಿಮೆ ಇರಬಹುದು ಎಂದು ಹೇಳಲಾಗುತ್ತದೆ. ಆದರೆ. ಇದನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಗಮನಿಸಬೇಕು.
             ತಡೆಗಟ್ಟುವ ಕ್ರಮಗಳನ್ನು ಮುಂದುವರಿಸಬೇಕೇ?: ತಡೆಗಟ್ಟುವ ಮತ್ತು ದೂರವಿಡುವ ಕ್ರಮಗಳು ಮಕ್ಕಳ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳಿದರೂ ಸಹ ಮಾಸ್ಕ್, ಸಾಮಾಜಿಕ ಅಂತರವನ್ನು ಇನ್ನೂ ಅನುಸರಿಸಬೇಕಾದ ಅನಿವಾರ್ಯತೆ ಖಂಡಿತಾ ಇದೆ. ಏಕೆಂದರೆ ಮಕ್ಕಳಿಗೆ ಲಸಿಕೆ ಲಭ್ಯವಿಲ್ಲ. ಅದು ಸಿಗುವವರೆಗೂ ಪ್ರೋತ್ಸಾಹಿಸಬೇಕು. ಇದರ ಜೊತೆಗೆ ಮಕ್ಕಳು ಉತ್ತಮ ನೈರ್ಮಲ್ಯ ಕ್ರಮಗಳನ್ನು ಅನುಸರಿಸುವಂತೆ ಮಾಡುವುದು ಅಷ್ಟೇ ಮುಖ್ಯ. ಇದು ಕೊರೊನಾ ಹರಡುವುದನ್ನು ತಡೆಯುವಲ್ಲಿ ಪ್ರಮುಖಪಾತ್ರ ವಹಿಸುವುದು.




Below Post Ad


ಜಾಹಿರಾತು














ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries