ತಿರುವನಂತಪು: ನಾಳೆ ಮತ್ತು ಭಾನುವಾರ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ನಿಯಂತ್ರಣ ಇರಲಿದೆ. ವಾರದ ಕೊನೆಯ ದಿನಗಳಲ್ಲಿ ಟ್ರಿಪಲ್ ಲಾಕ್‌ಡೌನ್ ನ್ನು ಬಗೆಗಿನ
ದೊಡ್ಡ ಸಂಸ್ಥೆಗಳು ಮತ್ತು ಮಾಲ್‌ಗಳು ತೆರೆಯದಂತೆ ಮತ್ತು ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಹೊರ ತೆರಳದಂತೆ ನಿಯಂತ್ರಣ ಹೇರಿ ಈ ಕ್ರಮವಾಗಿದೆ ಎಂದು ಸರ್ಕಾರ ಹೇಳಿದೆ.
ನಾಳೆ ಮತ್ತು ಭಾನುವಾರದಂದು ಹೋಟೆಲ್‌ಗಳನ್ನು ಸಾರ್ವಜನಿಕರಿಗೆ ತೆರೆಯಲು ಅನುಮತಿಸಲಾಗುವುದಿಲ್ಲ. ಬದಲಾಗಿ ಆಹಾರಗಳನ್ನು ಮನೆಮನೆ ಒದಗಿಸಲು ವ್ಯವಸ್ಥೆ ಮಾಡಬಹುದು. ಅಂತಹ ವ್ಯವಸ್ಥೆಗಳು ಆನ್‌ಲೈನ್ ವಿತರಣೆಯ ಮೂಲಕ ಮಾಡಲು ಅಡ್ಡಿಗಳಿಲ್ಲ ಎಂದು ಸೂಚಿಸಲಾಗಿದೆ.
ಮೊಬೈಲ್ ಫೋನ್ ಅಂಗಡಿಗಳನ್ನು ಇಂದು ತೆರೆಯಲು ಅನುಮತಿಸಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಈ ವಿನಾಯಿತಿ ನೀಡಲಾಗಿದೆ. ಎಲ್ಲಾ ಸಾರ್ವಜನಿಕ-ಖಾಸಗಿ ನಿರ್ಮಾಣ ಚಟುವಟಿಕೆಗಳನ್ನು ಶನಿವಾರ ಮತ್ತು ಭಾನುವಾರ ಸಾಮಾಜಿಕ ಅಂತರ ಕಾಯ್ದುಕೊಂಡು ಮುಂದುವರಿಸಬಹುದು. ಆದರೆ, ಅಂತಹ ಕೆಲಸಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ.