ಮಳೆಗಾಲ ಶುರು ಆಗ್ತಾ ಇದೆ. ಈ ಮಾನ್ಸೂನ್ ಜೊತೆಗೆ ಕೆಲವೊಂದಿಷ್ಟು ಸೀಸನಲ್ ಹಣ್ಣುಗಳು, ಅದರ ರೆಸಿಪಿಗಳು ಆರಂಭ ಆಗ್ತಾ ಇದೆ. ಅದ್ರಲ್ಲಿ ಒಂದು ಈ ಹಲಸಿನ ಹಣ್ಣಿನ ಅಪ್ಪಮ್ (ಅಪ್ಪ )ಅಥವಾ ಮುಳ್ಕ. ಕರಾವಳಿ ಹಾಗೂ ಮಲೆನಾಡಿನಲ್ಲಿ ಅತೀ ಹೆಚ್ಚು ಪ್ರಸಿದ್ದಿ ಪಡೆದಿರುವ ಈ ಅಪ್ಪಮ್ ನ್ನು ಇಷ್ಟ ಪಡದವ್ರೆ ಇಲ್ಲ. ಜೋರಾಗಿ ಸುರಿಯೋ ಮಳೆ ಜೊತೆಗೆ ಸಂಜೆ ಟೈಮಲ್ಲಿ ಬಿಸಿ ಬಿಸಿ ಕಾಫಿ ಜೊತೆ ಗರಿ ಗರಿಯಾದ ಅಪ್ಪಮ್ ತಿನ್ನುತ್ತಿದ್ದರೆ, ಪಾತ್ರೆ ಖಾಲಿ ಆಗಿದ್ದೇ ಗೊತ್ತಾಗೊಲ್ಲ. ಅಂತಹ ಅಪ್ಪಮ್ ಮಾಡೋದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.
Recipe By: Shreeraksha
Recipe Type: Vegetarian
Serves: 4
ಬೇಕಾಗುವ ಪದಾರ್ಥಗಳು :
ಹಲಸಿನ ಹಣ್ಣು - 4 ಬಿಡಿಸಿದ್ದು
ಗೋಧಿ ಹಿಟ್ಟು - 1 ಕಪ್
ರವೆ - 1/3 ಕಪ್
ಸಕ್ಕರೆ - 1/4 ಕಪ್
ಉಪ್ಪು - ಪಿಂಚ್
ಏಲಕ್ಕಿ - 3
ತುರಿದ ತೆಂಗಿನಕಾಯಿ - 1/4 ಕಪ್
ಅಡುಗೆ ಸೋಡಾ - ಪಿಂಚ್
ತುಪ್ಪ - ಹುರಿಯಲು
ತಯಾರಿಸುವ ವಿಧಾನ:
1. ಹಲಸಿನ ಹಣ್ಣಿನ ಬೀಜ ತೆಗೆದು, ಅದನ್ನು ತುಂಡುಮಾಡಿ ಮಿಕ್ಸಿಗೆ ಹಾಕಿ ನೀರು ಹಾಕದೆ ಚೆನ್ನಾಗಿ ರುಬ್ಬಿಕೊಂಡು ಬದಿಗಿರಿಸಿ.
2. ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟನ್ನು ಹಾಕಿ.ಇದಕ್ಕೆ ರವೆ, ಅಡುಗೆ ಸೋಡಾ, ಉಪ್ಪು, ಸಕ್ಕರೆ, ತೆಂಗಿನಕಾಯಿ ಮತ್ತು ಪುಡಿಮಾಡಿದ ಏಲಕ್ಕಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.
3. ಇದಕ್ಕೆ ಬೇಕಾದ ನೀರಿನೊಂದಿಗೆ ಹಲಸಿನ ಹಣ್ಣಿನ ಮಿಶ್ರಣವನ್ನು ಸೇರಿಸಿ. ದಪ್ಪ ನಯವಾದ ಬ್ಯಾಟರ್ ಆಗುವಂತೆ ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
4. ಅಪ್ಪಮ್ ಮಾಡುವ ಪ್ಯಾನ್ ಗೆ ತುಪ್ಪವನ್ನು ಸವರಿ ಕಾಯಿಸಿ. ಬದಿಗಿಟ್ಟ ಹಿಟ್ಟಿನ ಬ್ಯಾಟರ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪ್ಯಾನ್ಗೆ ಸುರಿಯಿರಿ. ಮೀಡಿಯಂ ಫ್ಲೆಮ್ ನಲ್ಲಿ ಬೇಯಿಸಿ, ನಂತರ ನಿಧಾನಕ್ಕೆ ಇನ್ನೊಂದು ಬದಿಗೆ ತಿರುಗಿಸಿ ಬೇಯಿಸಿ.
5. ಎಲ್ಲಾ ಕಡೆ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಪ್ಯಾನ್‌ನಿಂದ ತೆಗೆಯಿರಿ.
6. ಈಗ ರುಚಿ ರುಚಿಯಾದ ಹಲಸಿನ ಹಣ್ಣಿನ ಅಪ್ಪಮ್ ಬಿಸಿ ಬಿಸಿಯಾಗಿ ಸವಿಯಲು ಸಿದ್ಧ.