ಮುಳ್ಳೇರಿಯ: ಕಾರಡ್ಕ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ಕರುಣಾಕರ ಮಾಸ್ತರ್ ಅವರು ಚೆನ್ನಂಗೋಡಿನ ಸತ್ಯ ಸಿಹೆಚ್ ಅವರ ಮಕ್ಕಳಾದ ದಿವ್ಯಾಶ್ರೀ ಸಿಎಚ್ (9 ನೇ ತರಗತಿ) ಮತ್ತು ಅಭಿಲಾಶ್ (10 ನೇ ತರಗತಿ) ಅವರ ಆನ್‍ಲೈನ್ ಕಲಿಕೆಗಾಗಿ ಸ್ಮಾರ್ಟ್‍ಪೋನ್ ನೀಡುವ ಮೂಲಕ ಮಾದರಿಯಾಗಿದ್ದಾರೆ. ಪೋನ್ ಚಾಲೆಂಜ್ ಯೋಜನೆಯಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆಗೆ ಅವರು ಚಾಲನೆಯಿತ್ತರು. ಪಿಟಿಎ ಅಧ್ಯಕ್ಷ ಮೋಹನನ್ ಕಾರಡ್ಕ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಕುಂಞಂಬು ಪಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.