ಕುಂಬಳೆ: ವಿಶ್ವ ಪರಿಸರ ದಿನದ ಅಂಗವಾಗಿ ಕುಂಬಳೆ ಜಿಎಚ್.ಎಸ್. ಶಾಲಾ ವಠಾರದಲ್ಲಿ ಸ್ಪಂದನ ಕುಂಬಳೆ ಮತ್ತು ಸಾಗರ ಲೈಬ್ರೆರಿ ಕೃಷ್ಣನಗರ ಇದರ ವತಿಯಿಂದ ಶಾಲಾ ಅಧ್ಯಾಪಕರುಗಳ ಮತ್ತು ಸಿಬ್ಬಂದಿಗಳ ಸಹಯೋಗದೊಂದಿಗೆ ನಡೆದ ವಿಶ್ವ ಪರಿಸರ ದಿನ ಸುಂದರಲಾಲ್ ಬಹುಗುಣ ಸಂಸ್ಮರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯೆ ಗಿರಿಜಾ ತಾರಾನಾಥ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದಾರ್ಶನಿಕ ಸುಂದರ ಲಾಲ್ ಬಹುಗುಣ ಅವರ ಪರಿಸರ ಕಾಳಜಿ ಜಗತ್ತಿಗೇ ಮಾದರಿಯಾದುದು. ಜೀವಜಾಲಗಳ ಅಸ್ತಿತ್ವದ ಮೂಲಾಧಾರವಾದ ಪರಿಸರ, ಪ್ರಕೃತಿಯನ್ನು ಮೂಲ ಸ್ವರೂಪದಲ್ಲಿ ಕಾಪಿಡದಿದ್ದರೆ ಅವನತಿ ಖಚಿತ. ಕುಂಬಳೆಯ ಶಾಲಾ ಪರಿಸರವನ್ನು ಉಳಿಸಿ ಬೆಳೆಸುವುದು ಮತ್ತು ಸ್ವಚ್ಛವಾಗಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ ಎಂದು ಅವರು ತಿಳಿಸಿದರು.
ಶಾಲಾ ಮೈದಾನದ ಸುತ್ತ ಹಲವಾರು ವೃಕ್ಷ ಗಿಡಗಳನ್ನು ನೆಡಲಾಯಿತು. ಕುಂಬಳೆ ಪ್ರಾಥಮಿಕ ಶಾಲೆಯ ಅಧ್ಯಾಪಕರುಗಳಾದ ಸರಿತಾ ಟೀಚರ್ ,ಜಾನ್ ಮತ್ತು ಬಾಬು ಸಿದ್ದಿಬೈಲ್ ಪರಿಸರ ಸಂರಕ್ಷಣೆಯ ಬಗ್ಗೆ ವಿವರಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಸದಸ್ಯೆ ಶೋಭಾ ರೋಹಿತಾಕ್ಷ, ಡಾ ದಿವಾಕರ್ ರೈ, ಮೋಹಮ್ಮದ್ ಕುಂಞÂ್ಞ , ಸತೀಶ್ ಶೆಟ್ಟಿ ಬಂಬ್ರಾಣ, ತಿಲಕ್ ರಾಜ್ ಶೆಟ್ಟಿ ಬಂಬ್ರಾಣ, ಪ್ರಸಾದ್ ಸಿಎಚ್ ಕೃಷ್ಣನಗರ ,ಅನಿಲ್ ಗಟ್ಟಿ ದೇವಿನಗರ, ಜಯಪ್ರಕಾಶ್ ನಾರಾಯಣಮಂಗಲ, ವೇಣು ನಾಯರ್ ಕೃಷ್ಣನಗರ,ರಾಮ ಪೆÇಯ್ಯಕಂಡ, ಲೀರಾ, ಸಾಗರ್ ಲೈಬ್ರರಿ ಹಾಗೂ ಸ್ಪಂದನ ಕುಂಬಳೆ ಮತ್ತು ಚಿರಂಜೀವಿ ಕುಂಬಳೆ ಸದಸ್ಯರು ಸಹಕರಿಸಿದರು. . ಸ್ಪಂದನ ಕುಂಬಳೆ ಇದರ ಪೃಥ್ವಿರಾಜ್ ಶೆಟ್ಟಿ ಸ್ವಾಗತಿಸಿ, ನ್ಯಾಯವಾದಿ ಉದಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಲಕ್ಷ್ಮಣ ಪ್ರಭು ಕುಂಬಳೆ ವಂದಿಸಿದರು.