ಪೆರ್ಲ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಣ್ಮಕಜೆ ಪಂಚಾಯಿತಿ ಬಣ್ಪುತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿಜಯ ಮಾಸ್ಟರ್ ಅವರ ನೇತೃತ್ವದಲ್ಲಿ ರಸ್ತೆಬದಿ ಮರವಾಗಿ ಬೆಳೆಯಬಲ್ಲ ಸಸಿ ಗಳನ್ನು ನೆಟ್ಟುಬೆಳೆಸುವ ಅಭಿಯಾನ ಶನಿವಾರ ನಡೆಸಲಾಯಿತು.
ಬದಿಯಡ್ಕ ಪೊಲೀಸ್ ಠಾಣೆ ಸೀನಿಯರ್ ಪೊಲೀಸ್ ಅಧಿಕಾರಿಗಳಾದ ರಾಜೇಶ್ ಕಾನತ್ತೂರ್ ಹಾಗೂ ಶ್ರೀನೇಶ್ ಶಾಲಾ ವಠಾರದಲ್ಲಿ ತೆಂಗಿನ ಸಸಿ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಬಣ್ಪುತ್ತಡ್ಕದಿಂದ ಉಕ್ಕಿನಡ್ಕ ವರೆಗೆ ರಸ್ತೆ ಎರಡೂ ಬದಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸ್ಥಳೀಯ ನಿವಾಸಿಗಳನ್ನೂ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು. ಕೃಷಿಕ ವಿಶ್ವೇಶ್ವರ ಕಾರ್ಯಾಡು ಅವರು ನೂರಕ್ಕೂ ಹೆಚ್ಚು ಹಲಸಿನ ಸಸಿಗಳನ್ನು ಉದಾರವಾಗಿ ನೀಡುವ ಮೂಲಕ ಅಭಿಯಾನದಲ್ಲಿ ಕೈಜೋಡಿಸಿದರು.