ನವದೆಹಲಿ: ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಎಲ್ಲಾ ಕೊರೋನಾ ರೂಪಾಂತರ ವಿರುದ್ಧ ಕಾರ್ಯನಿರ್ವಹಿಸಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಶುಕ್ರವಾರ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಪ್ರಸ್ತುತ 12 ರಾಷ್ಟ್ರಗಳಿರುವ ಡೆಲ್ಟಾ ಪ್ಲಸ್, ಸಾರ್ಸ್ ಕೋವ್ 2 ರೂಪಾಂತರಗಳಾದ ಅಲ್ಫಾ,ಬೆಟಾ, ಗಾಮ ಸೇರಿದಂತೆ ಎಲ್ಲಾ ನಾಲ್ಕು ಕೊರೋನಾ ರೂಪಾಂತರ ವಿರುದ್ಧ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಕಾರ್ಯನಿರ್ವಹಸಲಿವೆ ಎಂದರು.
ದೇಶದಲ್ಲಿ 48 ಡೆಲ್ಟಾ ಕೇಸ್ ಗಳು ಪತ್ತೆಯಾಗಿವೆ. ಆದರೆ ಮುಖ್ಯವಾಗಿ, ಅವುಗಳನ್ನು ಬಹಳ ಸ್ಥಳೀಕರಿಸಲಾಗಿದೆ. ಈ ವೈರಸ್ ಅನ್ನು ಈಗ ಪ್ರತ್ಯೇಕಿಸಲಾಗಿದೆ ಎಂದು ಅವರು ತಿಳಿಸಿದರು.
ಆಲ್ಫಾ, ಬೆಟಾ, ಗಾಮಾ ಮತ್ತು ಡೆಲ್ಟಾಕ್ಕಾಗಿ ಅದೇ ಪರೀಕ್ಷೆಯನ್ನು ಮಾಡುತ್ತಿದ್ದೇವೆ. ಲಸಿಕೆ ಪರಿಣಾಮವನ್ನು ಪರೀಕ್ಷಿಸಲು ಪ್ರಯೋಗಾಲಯ ಪರೀಕ್ಷೆಯನ್ನು ಎದುರು ನೋಡುತ್ತಿದ್ದೇವೆ ಮತ್ತು ಸುಮಾರು 7 ರಿಂದ 10 ದಿನಗಳ ಅವಧಿಯಲ್ಲಿ ನಾವು ಫಲಿತಾಂಶಗಳನ್ನು ತಿಳಿಯಬೇಕಾಗಿದೆ ಎಂದು ಅವರು ಹೇಳಿದರು.