ಕಾಸರಗೋಡು: ಕೋವಿಡ್ ಅವಧಿಯಲ್ಲಿ ತರಬೇತಿ ಸಹಿತ ಸೌಲಭ್ಯ ವಿಲ್ಲದೆ ಬಳಲಿರುವ ಕ್ರೀಡಾ ವಲಯಕ್ಕೆ ಬುಧವಾರ ನಡೆದ ವಿಶ್ವ ಒಲಿಂಪಿಕ್ಸ್ ದಿನಾಚರಣೆ ಪುನಶ್ಚೇತನ ನೀಡಿದೆ.
ಮಾವುಂಗಾಲ್ ಮಂಞಂಪೆÇದಿಕುನ್ನು ನಲ್ಲಿ ಈ ಸಂಬಂಧ ಕಾಸರಗೋಡು ಜಿಲ್ಲಾ ಮಟ್ಟದ ಒಲಿಂಪಿಕ್ಸ್ ದಿನಾಚರಣೆ ನಡೆಯಿತು. ಕ್ರೀಡಾಜ್ಯೋತಿ ಬೆಳಗುವ ಮೂಲಕ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಕೇರಳ ರಣಜಿ ಪಟು ಮುಹಮ್ಮದ್ ಅಝರುದ್ದೀನ್ ಅವರಿಗೆ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಲಾಯಿತು. ಅಝರುದ್ದೀನ್ ಅವರಿಂದ ವಿವಿಧ ಕ್ರೀಡಾ ಸಂಘಟನೆಗಳ ಪ್ರತಿನಿಧಿಗಳು ಕ್ರೀಡಾಜ್ಯೋತಿ ಪಡೆದುಕೊಂಡರು.
ಜಿಲ್ಲಾ ಒಲಿಂಪಿಕ್ಸ್ ಅಸೊಸಿಯೇಶನ್ ಅಧ್ಯಕ್ಷ ಟಿ.ವಿ.ಬಾಲನ್ ಅಧ್ಯಕ್ಷತೆ ವಹಿಸಿದ್ದರು. ಅಜಾನೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀದೇವಿ ಕೆ.ಆರ್., ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್, ಜಿಲ್ಲಾ ಕ್ರೀಡಾ ಮಂಡಳಿ ಉಪಾಧ್ಯಕ್ಷ ಪಿ.ಕೆ.ಅಶೋಕನ್ ಮೊದಲಾದವರು ಉಪಸ್ಥಿತರಿದ್ದರು.