HEALTH TIPS

ರಾಜಕೀಯ ದ್ವೇಷ: ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ಸಿನಿಮಾ ಶೈಲಿಯಲ್ಲಿ ಇಬ್ಬರು ಟಿಡಿಪಿ ನಾಯಕರ ಭೀಕರ ಹತ್ಯೆ

           ಕರ್ನೂಲ್ಆಂಧ್ರ ಪ್ರದೇಶದಲ್ಲಿ ಮತ್ತೆ ಹತ್ಯಾ ರಾಜಕೀಯ ಮುಂದುವರೆದಿದ್ದು, ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ಸಿನಿಮಾ ಶೈಲಿಯಲ್ಲಿ ಇಬ್ಬರು ಟಿಡಿಪಿ ನಾಯಕರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

          ಆಂಧ್ರ ಪ್ರದೇಶದ ಪಣ್ಯಂ ವಿಧಾನಸಭಾ ಕ್ಷೇತ್ರದ ಗಡಿ ವೇಮುಲಾ ಮಂಡಲದ ಪೆಸರವಾಯಿ ಗ್ರಾಮದ ಸಹೋದರರಾದ ಒಡ್ಡು ನಾಗೇಶ್ವರ ರೆಡ್ಡಿ ಮತ್ತು ಅವರ ಕಿರಿಯ ಸಹೋದರ ಪ್ರತಾಪ್ ರೆಡ್ಡಿ ಅವರನ್ನು ಸಿನಿಮಾ ಶೈಲಿಯಲ್ಲಿ ಅಟ್ಟಾಡಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಸ್ಮಶಾನದಿಂದ ಬರುವಾಗ ಹತ್ಯೆ ಮೃತ ಒಡ್ಡು ನಾಗೇಶ್ವರ ರೆಡ್ಡಿ ಮಾಜಿ ಸರ್ಪಂಚ್ ಆಗಿದ್ದು, ಅವರ ಕಿರಿಯ ಸಹೋದರ ಪ್ರತಾಪ್ ರೆಡ್ಡಿ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಪೆಸರವಾಯಿ ಗ್ರಾಮದ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ದುಷ್ಕರ್ಮಿಗಳು ಇಬ್ಬರೂ ಸಹೊದರರನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಲೆ ಗೈದಿದ್ದಾರೆ. ಅದೇ ರಸ್ತೆಯಲ್ಲಿ ಸಹೋದರರು ಸಾಗುತ್ತಿದ್ದ ವೇಳೆ ಅವರ ಬೊಲೆರೊ ವಾಹನಕ್ಕೆ ದುಷ್ಕರ್ಮಿಗಳ ವಾಹನ ಢಿಕ್ಕಿ ಹೊಡೆದಿದ್ದು, ಈ ವೇಳೆ ವಾಹನದಿಂದ ಕೆಳಗೆ ಇಳಿಯುತ್ತಲೇ ಅವರನ್ನು ಅಟ್ಟಾಡಿಸಿ ಕೊಲೆಗೈಯ್ಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ನಿಧನರಾದ ಆಪ್ತ ಸಂಬಂಧಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಬ್ಬರು ಸಹೋದರರು ಸ್ಮಶಾನದಿಂದ ವಾಪಸ್ ಆಗುತ್ತಿದ್ದಾಗ ಸ್ಥಳದಲ್ಲೇ ಅವಿತಿದ್ದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಈ ವೇಳೆ ನಾಗೇಶ್ವರ ರೆಡ್ಡಿ ಮತ್ತು ಪ್ರತಾಪ್ ರೆಡ್ಡಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇಬ್ಬರನ್ನೂ ಸಮೀಪದ ನಂದ್ಯಾಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಇಬ್ಬರೂ ಸಾವಿಗೀಡಾಗಿದ್ದರು.

                       ಗ್ರಾಮದಲ್ಲಿ ಭಾರಿ ಭದ್ರತೆ
        ಜೋಡಿ ಹತ್ಯೆ ಬಳಿಕ ಕೃತ್ಯ ನಡೆದ ಪೆಸರವಾಯಿ ಗ್ರಾಮದಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ. ಗ್ರಾಮದಲ್ಲಿ ಯಾವುದೇ ಘರ್ಷಣೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ನಂದ್ಯಾಲಾ ಡಿಎಸ್ಪಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದು, ಘಟನೆಯಲ್ಲಿ ಗಾಯಗೊಂಡವರ ಹೇಳಿಕೆಗಳ ಆಧಾರದ ಮೇಲೆ ಈ ಘಟನೆಗೆ ಯಾರು ಕಾರಣ ಎಂಬ ವಿಚಾರದ ಕುರಿತು ತನಿಖೆ ನಡೆಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries