ತಿರುವನಂತಪುರ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಕೇಂದ್ರೀಕೃತ ಮೌಲ್ಯಮಾಪನ ನಿನ್ನೆ ಆರಂಭವಾಯಿತು. ರಾಜ್ಯದ 70 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಾರಂಭವಾಗಿದೆ. ಕೊರೋನದ ಸಂದರ್ಭದಲ್ಲಿ ನಡೆಯುವ ಮೌಲ್ಯಮಾಪನವು ಗಮನಾರ್ಹವಾಗಿದ್ದು, ಕಳವಳಗಳ ಮಧ್ಯೆ ಈ ತಿಂಗಳ 25 ರಂದು ಕೊನೆಗೊಳ್ಳುತ್ತದೆ. ಈ ಬಾರಿ 12604 ಶಿಕ್ಷಕರು ಮೌಲ್ಯಮಾಪನಕ್ಕಾಗಿ ನಿಯುಕ್ತರಾಗಿದ್ದಾರೆ.
ಎಸ್‍ಎಸ್‍ಎಲ್‍ಸಿ / ಟಿಎಚ್‍ಎಸ್‍ಎಲ್‍ಸಿ ಪರೀಕ್ಷೆಗಳ ಮೌಲ್ಯಮಾಪನ ಪ್ರಾರಂಭವಾಯಿತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮೌಲ್ಯಮಾಪನಕ್ಕಾಗಿ ರಾಜ್ಯದ 70 ಕೇಂದ್ರಗಳಲ್ಲಿ ಒಟ್ಟು 12512 ಮಂದಿ ಶಿಕ್ಷಕರನ್ನು ಮತ್ತು ಟಿಎಚ್‍ಎಸ್‍ಎಲ್‍ಸಿ ಪರೀಕ್ಷೆಯ ಮೌಲ್ಯಮಾಪನಕ್ಕಾಗಿ 2 ಕೇಂದ್ರಗÀಳಲ್ಲಿ 92 ಶಿಕ್ಷಕರನ್ನು ನಿಯೋಜಿಸಲಾಗಿದೆ. 25 ರಂದು ಮೌಲ್ಯಮಾಪನ ಪೂರ್ಣಗೊಳ್ಳಲಿದೆ. ಪರೀಕ್ಷಕರಾಗಿ ನೇಮಕಗೊಂಡಿರುವ ಶಿಕ್ಷಕರು ಬೆಳಿಗ್ಗೆ 9 ಗಂಟೆಯೊಳಗೆ ಆಯಾ ಶಿಬಿರಗಳಿಗೆ ಆಗಮಿಸಬೇಕು ಎಂದು ಪರೀಕ್ಷಾ ಸಭಾಂಗಣ ಕಾರ್ಯದರ್ಶಿ ತಿಳಿಸಿದ್ದರು. ಎಸ್‍ಎಸ್‍ಎಲ್‍ಸಿ / ಟಿಎಚ್‍ಎಸ್‍ಎಲ್‍ಸಿ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆಗಳನ್ನು ರದ್ದುಪಡಿಸಲು ಈಗಾಗಲೇ ನಿರ್ಧರಿಸಲಾಗಿತ್ತು.
ಇದೇ ವೇಳೆ, ಜೂನ್ 1 ರಂದು ಪ್ರಾರಂಭವಾದ ಹೈಯರ್ ಸೆಕೆಂಡರಿ ಮೌಲ್ಯಮಾಪನವು ಜೂನ್ 19 ರಂದು ಕೊನೆಗೊಳ್ಳುತ್ತದೆ. ಮೌಲ್ಯಮಾಪನ ಕೇಂದ್ರÀಗಳಿಗೆ ತೆರಳುವ ಎಸ್‍ಎಸ್‍ಎಲ್‍ಸಿ / ಹೈಯರ್ ಸೆಕೆಂಡರಿ ಶಿಕ್ಷಕರಿಗೆ ಕೆ.ಎಸ್.ಆರ್.ಟಿ.ಸಿ. ವಿಶೇಷ ಸೇವೆಯನ್ನು ನಡೆಸುತ್ತಿದೆ. ರಾಜ್ಯದ ಎಲ್ಲ ಡಿಪೆÇೀಗಳಿಂದ ವಿಶೇಷ ಸೇವೆಗಳನ್ನು ಒದಗಿಸಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದರು. ಶಿಕ್ಷಕರಿಗೆ ವ್ಯಾಕ್ಸಿನೇಷನ್ ಸೇರಿದಂತೆ ಸುರಕ್ಷಾ ಕ್ರಮಗಳು ಈಗಾಗಲೇ ಪೂರ್ಣಗೊಂಡಿದೆ.