ಚೆನ್ನೈ: ಎಐಎಡಿಎಂಕೆ ಸಂಯೋಜಕ ಮತ್ತು ಮಾಜಿ ಮುಖ್ಯಸ್ಥ ಸ್ಥಾನಕ್ಕೆ ಸಚಿವ ಓ ಪನೀರ್ ಸೆಲ್ವ ಅವರು ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಉಪನಾಯಕರಾಗಿ ಸೋಮವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ"
ಅಸೆಂಬ್ಲಿಯಲ್ಲಿ ಪಕ್ಷದ ವಿಪ್ ಮತ್ತು ಉಪ ವಿಪ್ ಆಗಿ ಮಾಜಿ ಸಚಿವ ಎಸ್ ಪಿ ವೇಲುಮಣಿ ಮತ್ತು ಕೆ ರವಿ ಅವರನ್ನು ನೇಮಕ ಮಾಡಲಾಯಿತು.
ಮಾಜಿ ಸಚಿವರಾದ ಕದಂಬೂರ್ ಸಿ ರಾಜು ಮತ್ತು ಕೆ ಪಿ ಅನ್ಬಾಲಗನ್ ಮತ್ತು ಪಿ ಎಚ್ ಮನೋಜ್
ಪಾಂಡಿಯನ್ ಅವರುಗಳನ್ನು ಕ್ರಮವಾಗಿ ಖಜಾಂಚಿ, ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದ ಶಶಿಕಲಾ ಅವರಿಗೆ ಇತ್ತ ಪಳನಿ ಸ್ವಾಮಿ ಅವರೂ ತಮ್ಮ ಬಣದ ನಾಯಕರಿಗೆ ಮಹತ್ವದ ಹುದ್ದೆಗಳು ಸಿಗುವಂತೆ ನೋಡಿಕೊಂಡಿರರುವ ಬೆಳವಣಿಗೆಯಿಂದ ತೀವ್ರ ಹಿನ್ನಡೆಯುಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.