ಬದಿಯಡ್ಕ: ಕೇರಳದ ಎಲ್ ಡಿ ಎಫ್ ಸರ್ಕಾರ ಸುಳ್ಳು ಆರೋಪವನ್ನು ಹೊರಿಸಿ ಬಿಜೆಪಿಯ ಮೇಲೆ ನಡೆಸುವ ಷಡ್ಯಂತ್ರವನ್ನು ಪ್ರತಿಭಟಿಸಿ ಬಿಜೆಪಿ ಕುಂಬ್ಡಾಜೆ ಪಂಚಾಯತಿನಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಕುಂಬ್ಡಾಜೆ ಪಂಚಾಯತಿಗೊಳಪಟ್ಟ ಪ್ರಧಾನ ಕೇಂದ್ರಗಳಲ್ಲಿ ಒಟ್ಟು 21 ಪ್ರತಿಭಟನಾ ಸಭೆಗಳನ್ನು ನಡೆಸಿ ಸರ್ಕಾರದ ಅನೀತಿಯನ್ನು ಖಂಡಿಸಲಾಯಿತು. ರಾಜ್ಯ ಸರ್ಕಾರ ಪೆÇೀಲೀಸ್ ಇಲಾಖೆಯನ್ನು ದುರುಪಯೋಗ ಪಡಿಸುತ್ತಿದೆ. ಕಳೆದ ದಿನಗಳಲ್ಲಿ ಎಲ್ ಡಿಎಫ್ ಸರ್ಕಾರದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ಬೆಳಕಿಗೆ ತಂದು ಜನರ ಮುಂದಿಟ್ಟ ಬಿಜೆಪಿ ಇದೀಗ ಅವರಿಗೆ ಸಿಂಹ ಸ್ವಪ್ನವಾಗಿ ಪರಿಣಮಿಸಿದೆ. ಬಿಜೆಪಿಯನ್ನು ತೇಜೋವಧೆ ಮಾಡುವ ಮೂಲಕ ಕಾರ್ಯಕರ್ತರ ಹಾಗೂ ನೇತಾರರ ಮನೋಸ್ಥೈರ್ಯವನ್ನು ಕುಗ್ಗಿಸಿ ಬಿಜೆಪಿಯನ್ನು ಇಲ್ಲದಾಗಿಸಬಹುದೆಂಬ ವ್ಯಾಮೋಹದೊಂದಿಗೆ ಹೊರಟಿರುವ ಎಲ್ ಡಿ ಎಫ್ ನ ಈ ನೀತಿ ವ್ಯಾಮೋಹ ಮಾತ್ರವೆಂದು ಸಭೆಗಳಲ್ಲಿ ಮುನ್ನೆಚ್ಚರಿಕೆಯನ್ನು ನೀಡಲಾಯಿತು. ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು, ಪ್ರಜಾಪ್ರಭುತ್ವವನ್ನು ಕಾಪಾಡಬೇಕು ಎಂದೂ ಸಭೆಗಳಲ್ಲಿ ಆಗ್ರಹಿಸಲಾಯಿತು. ಈ ರೀತಿಯ ಅನೀತಿಯನ್ನು ನಡೆಸಿ ರಾಜಕೀಯ ಬಳಸಿ ಬಿಜೆಪಿಯನ್ನು ಇಲ್ಲದಾಗಿಸಬಹುದೆಂಬ ವ್ಯಾಮೋಹವನ್ನು ಬಿಟ್ಟುಬಿಡಬೇಕೆಂದೂ ಸೂಚಿಸಲಾಯಿತು.
ಪಂಚಾಯಾತಿನ ವಿವಿಧ ಭಾಗಗಳಲ್ಲಾಗಿ ನಡೆದ ಕಾರ್ಯಕ್ರಮಗಳಲ್ಲಿ ನೇತಾರರಾದ ಎಂ ಸಂಜೀವ ಶೆಟ್ಟಿ, ಶೈಲಜಾ ಭಟ್, ರವೀಂದ್ರ ರೈ ಗೋಸಾಡ, ಶಶಿಧರ ತೆಕ್ಕೇಮೂಲೆ,ಸುಂದರ ಮವ್ವಾರು, ಹರೀಶ್ ಗೋಸಾಡ, ಕೃಷ್ಣ ಶರ್ಮಾ, ರಾಜೇಶ್ ಶೆಟ್ಟಿ ಬಲೆಕ್ಕಳ,ರಾಜೇಶ್ ಕೆ ಪೆÇಡಿಪಳ್ಳ, ಸುನೀತಾ ಜೆ ರೈ, ಯಶೋದಾ ಎನ್, ಮೀನಾಕ್ಷಿ, ,ರಘು ಮಾಚಾವು, ವಾಸುದೇವ ಭಟ್, ಹರೀಶ್ ಕುಣಿಕುಳ್ಳಾಯ ಮೊದಲಾದವರು ಭಾಗವಹಿಸಿ ಮಾತನಾಡಿದರು.