ತಿರುವನಂತಪುರ: ರಾಜ್ಯದ 3 ಸಾವಿರ ಕೆ.ಎಸ್.ಆರ್.ಟಿ.ಸಿ. ಡೀಸೆಲ್ ಬಸ್‍ಗಳನ್ನು ನೈಸರ್ಗಿಕ ಅನಿಲ ಬಳಕೆಗಾಗಿ ಪರಿವರ್ತಿಸುವ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ. ಇದಕ್ಕಾಗಿ 300 ಕೋಟಿ ರೂ.ಅನುಮತಿಸಲಾಗಿದೆ. ಇದರಲ್ಲಿ `100 ಕೋಟಿ ರೂ. ಗಳನ್ನು ಈ ವರ್ಷವೇ ವಿನಿಯೋಗಿಸಲಾಗುತ್ತದೆ. ಕೆ.ಎಸ್.ಆರ್.ಟಿ.ಸಿ.ಯನ್ನು ಲಾಭದಾಯಕವಾಗಿಸಲು ಮುನ್ನುಡಿಯಾಗಲಿದೆ ಎಂದು ಸಚಿವರು ಹೇಳಿರುವರು.
ಯೋಜನೆಗಳನ್ನು ಪರಿಸರ ಸ್ನೇಹಿಯನ್ನಾಗಿ ಮಾಡುವ ಭಾಗವಾಗಿ 10 ಹೈಡ್ರೋಜನ್ ಚಾಲಿತ ಬಸ್ಸುಗಳನ್ನು ಪ್ರಾರಂಭಿಸುವಂತೆ ಸಚಿವರು ನಿರ್ದೇಶನ ನೀಡಿದರು. ಮೊದಲ ಹಂತದಲ್ಲಿ ಈ ಉದ್ದೇಶಕ್ಕಾಗಿ `10 ಕೋಟಿ ರೂ. ಬಳಸಲಾಗುತ್ತದೆ. ಇದನ್ನು ಭಾರತೀಯ ತೈಲ ನಿಗಮ ಮತ್ತು ಸಿಐಎಎಲ್ ಸಹಯೋಗದೊಂದಿಗೆ ಜಾರಿಗೆ ತರಲಾಗುತ್ತಿದೆ. ದಿನನಿತ್ಯದ ಕೆಲಸಗಳನ್ನು ಮಾಡುತ್ತಿರುವ ಪತ್ರಿಕೆ ವಿತರಕರು, ಮೀನುಗಾರಿಕೆ ಮಾಡುವವರು, ಚಿಲ್ಲರೆ ವ್ಯಾಪಾರಿಗಳು ಮತ್ತು ಮನೆ ವಿತರಣಾ ಯುವಕರಿಗೆ ಸಾರಿಗೆ ಇಲಾಖೆ ಸಾಲ ಯೋಜನೆಯನ್ನು ಪ್ರಾರಂಭಿಸುತ್ತದೆ ಎಂದು ಸಚಿವರು ಹೇಳಿದರು. 200 ಕೋಟಿ ರೂ.ಗಳನ್ನು ಬಡ್ಡಿರಹಿತ ಸಾಲವಾಗಿ ನೀಡಲಾಗುವ ಯೋಜನೆ ಇದಾಗಿದೆ ಎಂದು ಸಚಿವರು ತಿಳಿಸಿರುವರು.