ಭೋಪಾಲ್: ಪಶುವೈದ್ಯರನ್ನು ಗದರಿಸುವ ವೇಳೆ ಅಸಾಂವಿಧಾನಿಕ ಭಾಷೆ ಬಳಸಿದ್ದಾರೆಂದು ಬಿಜೆಪಿ ಸಂಸದೆ ಮತ್ತು ಪ್ರಾಣಿಗಳ ಹಕ್ಕುಗಳ ಕಾರ್ಯಕರ್ತೆ ಮೇನಕಾ ಗಾಂಧಿ ಅವರ ವಿರುದ್ಧ ಪ್ರತಿಭಟಿಸಲು ದೇಶಾದ್ಯಂತದ ಪಶುವೈದ್ಯರು ಕಪ್ಪು ಪಟ್ಟಿ ಧರಿಸಿ "ಕಪ್ಪು ದಿನ" ಆಚರಿಸಿದ್ದಾರೆ.
ರಾಷ್ಟ್ರವ್ಯಾಪಿ ಪ್ರತಿಭಟನಾ ಕರೆಯನ್ನು ಭಾರತೀಯ ಪಶುವೈದ್ಯಕೀಯ ಸಂಘ (ಐವಿಎ) ನೀಡಿದೆ.
ಮಾಜಿ ಕೇಂದ್ರ ಸಚಿವೆ ತಮ್ಮ ವಿರುದ್ಧ ನಿಂದನಾತ್ಮಕ ಭಾಷೆಯನ್ನು ಬಳಸಿದ್ದಾರೆಂದು ಖಂಡಿಸಿ ದೇಶಾದ್ಯಂತ ಪಶುವೈದ್ಯರು ತೀವ್ರವಾಗಿ ಖಂಡಿಸಿದರು ಮತ್ತು ಪ್ರತಿಭಟನೆಯಲ್ಲಿ ಕಪ್ಪು ಪಟ್ಟಿ ಕಟ್ಟಿದ್ದರೆಂದು ಐವಿಎ ಮತ್ತು ಪಶುವೈದ್ಯಕೀಯ ಮಂಡಳಿಯ ಅಧ್ಯಕ್ಷ ಉಮೇಶ್ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇನಕಾ ಗಾಂಧಿ ಅವರು ಮಂಗಳವಾರ ಪಶುವೈದ್ಯರನ್ನು ದೂರವಾಣಿಯಲ್ಲಿ ನಿಂದಿಸಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ ಸಂಭಾಷಣೆಯ ಸಮಯದಲ್ಲಿ ಅವರು ಅಸಾಂವಿಧಾನಿಕ ಭಾಷೆಯನ್ನು ಬಳಸಿದ್ದಾರೆ ಎಂದು ಹೇಳಿದರು. ಅವರ ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಷಯದ ಬಗ್ಗೆ ಸಂಘವು ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದು, ಈ ಹೇಳಿಕೆ ಬಗ್ಗೆ ಕ್ರ್ಮ ತೆಗೆದುಕೊಳ್ಳಲು ತ್ತಾಯಿಸಿದೆ, ಇದು ಕೇಸರಿ ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದುಹೇಳಿದ್ದಾರೆ. ಬಿಜೆಪಿ ಸಂಸದೆ ತಮ್ಮ ಹೇಳಿಕೆ ಹಿಂತೆಗೆದುಕೊಳ್ಳಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಸಂಘ ಒತ್ತಾಯಿಸಿತು.
ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ, 150 ಕ್ಕೂ ಹೆಚ್ಚು ಪಶುವೈದ್ಯರು ಮತ್ತು 1,000 ಕ್ಕೂ ಹೆಚ್ಚು ಪ್ಯಾರಾ ಮೆಡಿಕ್‌ಗಳು ರಾಷ್ಟ್ರ ಸೇವೆ ಮಾಡುವಾಗ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.