ಕಾಸರಗೋಡು: ತ್ರಿಸ್ತರ ಪಂಚಾಯತ್ ಗಳ ಸಹಕಾರದೊಂದಿಗೆ ಯೋಗದ ಮಹತ್ವ ಜನತೆಗೆ ತಲಪಿಸುವ ಯೋಜನೆಗಳನ್ನು ರಚಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದರು.
7 ನೇ ಅಂತಾರಾಷ್ಟ್ರೀಯ ಮಟ್ಟದ ಯೋಗ ದಿನಾಚರಣೆಯ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು. ಭಾರತೀಯ ಚಿಕಿತ್ಸಾ ಇಲಾಖೆ, ರಾಷ್ಟ್ರೀಯ ಆಯುಷ್ ಮಿಷನ್, ಆಯುಷ್ ಗ್ರಾಮ ಯೋಜನೆಗಳ ಜಂಟಿ ವತಿಯಿಂದದ ಕಾರ್ಯಕ್ರಮ ಜರುಗಿತು.
ಭಾರತೀಯ ಚಿಕಿತ್ಸಾ ಇಲಾಖೆಯ ಜಿಲ್ಲಾ ಮೆಡಿಕಲ್ ಅಧಿಕಾರಿ ಡಾ.ಸ್ಟೆಲ್ಲ ಡೇವಿಡ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ಕಾಞಂಗಾಡು ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಠಣ್, ಕಾಸರಗೋಡು ಎನ್.ಎ.ಎಂ.ಡಿ.ಪಿ.ಎಂ.ಡಾ.ಅಜಿತ್ ಕುಮಾರ್, ಸಂಜಯನ್, ಬಿಜು ಮೆನನ್, ಉಷಾ, ಮುರಳಿ ಮೊದಲಾದವರು ಉಪಸ್ಥಿತರಿದ್ದರು. "ಪ್ರಾಣಾಯಾಮ" ಎಂಬ ವಿಷಯದಲ್ಲಿ ಚೀಮೇನಿ ಆಯುಷ್ ವೆಲ್ ನೆಸ್ ಸಎಂಟರ್ ತಜ್ಞ ಡಾ.ಶ್ರೀಜಿತ್ ಆರ್. ತರಗತಿ ನಡೆಸಿದರು.
ಸಿ.ಎಂ.ಒ.ಟಿ.ಕೆ.ವಿಜಯಕುಮಾರ್ ಸ್ವಾಗತಿಸಿದರು. ಆಯುಷ್ ಗ್ರಾಮ ವೈದ್ಯಾಧಿಕಾರಿ ಡಾ.ರಜೀಲಾ ವಂದಿಸಿದರು.