ಬೆರ್ಲಿನ್: ಶಸ್ತ್ರಸರ್ಜಿತ ವ್ಯಕ್ತಿಯೋರ್ವ ಉದ್ದದ ಚೂರಿ ಹಿಡಿದು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ್ದು ಪರಿಣಾಮ ಹಲವರು ಸಾವನ್ನಪ್ಪಿದ್ದು ಹೆಚ್ಚಿನ ಜನರು ಗಾಯಗೊಂಡಿದ್ದಾರೆ ಎಂದು ಜರ್ಮನ್ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ನಗರ ವೂರ್ಜ್‌ಬರ್ಗ್‌ನಲ್ಲಿ ಈ ಘಟನೆ ನಡೆದಿದ್ದು ಶಂಕಿತನ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬವೇರಿಯನ್ ನಗರದ ಮಧ್ಯ ಭಾಗದಲ್ಲಿ ನಡೆದ ದಾಳಿಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳಲ್ಲಿ ದಾಳಿಕೋರನನ್ನು ಸುತ್ತುವರೆದಿರುವ ಪಾದಚಾರಿಗಳು, ಕುರ್ಚಿಗಳು ಮತ್ತು ಕೋಲುಗಳಿಂದ ಥಳಿಸುತ್ತಿರುವುದು ಕಾಣುತ್ತಿದೆ.
ನಗರದ ಮಧ್ಯಭಾಗದಲ್ಲಿರುವ ಬಾರ್ಬರೋಸಾ ಚೌಕದಲ್ಲಿ ನಡೆದ ಚಾಕು ದಾಳಿಯ ಬಗ್ಗೆ ಸಂಜೆ 5 ಗಂಟೆ ಸುಮಾರಿಗೆ ಅಧಿಕಾರಿಗಳನ್ನು ಎಚ್ಚರಿಸಲಾಗಿದೆ ಎಂದು ಪೊಲೀಸ್ ವಕ್ತಾರ ಕೆರ್ಸ್ಟಿನ್ ಕುನಿಕ್ ಹೇಳಿದ್ದಾರೆ. ದಾಳಿಯ ಸುದ್ದಿಗೆ ಬವೇರಿಯಾ ರಾಜ್ಯಪಾಲ ಮಾರ್ಕಸ್ ಸೋಡರ್ ಆಘಾತ ವ್ಯಕ್ತಪಡಿಸಿದ್ದಾರೆ.