HEALTH TIPS

ಪರಿಸರ ದಿನಾಚರಣೆ : ಕಾಸರಗೋಡು ಜಿಲ್ಲೆಯಲ್ಲಿ ಸಿದ್ಧಗೊಳ್ಳಲಿವೆ ಹರಿತ ಕ್ರಿಯಾ ಸೇನೆಯಿಂದ "ಸ್ವಂತ ಹಸುರು ದ್ವೀಪಗಳು"

                            

         ಕಾಸರಗೋಡು: ಹರಿತ ಕೇರಳಂ ಮಿಷನ್ ನೇತೃತ್ವದಲ್ಲಿ ಪರಿಸರ ದಿನವಾಗಿರುವ ಜೂ.5ರಂದು ಕಾಸರಗೋಡು ಜಿಲ್ಲೆಯಲ್ಲಿ ಹರಿತ ಕ್ರಿಯಾ ಸೇನೆಯಿಂದ ಸಿದ್ಧಗೊಳ್ಳಲಿವೆ "ಸ್ವಂತ ಹಸುರು ದ್ವೀಪಗಳು".   

                    ಜಿಲ್ಲೆಯ ಪ್ರತಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ, ಆಡಳಿತ ಸಮಿತಿಗಳ ಸಹಕಾರದೊಂದಿಗೆ ಹರಿತ ಕ್ರಿಯಾ ಸೇನೆಯ ಸದಸ್ಯರು ಹಸುರು ದ್ವೀಪ ನಿರ್ಮಿಸಿ, ಅವುಗಳ ಸಂರಕ್ಷಣೆ ವಹಿಸಿಕೊಳ್ಳಲಿದ್ದಾರೆ. 

                      ಹರಿತ ಕ್ರಿಯಾ ಸೇನೆಯ ಸ್ವಂತ ಹಸುರುದ್ವೀಪ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಜೂ.5ರಂದು ಅಜಾನೂರು ಗ್ರಾಮ ಪಂಚಾಯತ್ ಮಾವುಂಗಾಲ್ ಎಂ.ಸಿ.ಎಫ್. ಆವರಣದಲ್ಲಿ ಜರುಗಲಿದೆ. ಹಿರಿಯ ಸಾಹಿತಿ ಪಿ.ವಿ.ಕೆ.ಪನೆಯಾಲ್ ಉದ್ಘಾಟಿಸುವರು. ಅಜಾನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಟಿ. ಅಧ್ಯಕ್ಷತೆ ವಹಿಸುವರು. ಹರಿತ ಕೇರಳಂ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಯೋಜನೆ ಬಗ್ಗೆ ಮಾಹಿತಿ ನೀಡುವರು. 

        ಕಾಸರಗೋಡು ಜಿಲ್ಲೆಯ 40 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವೃದ್ಧಿಗೊಳ್ಳಲಿವೆ 431 ಹಸುರು ದ್ವೀಪಗಳು 

ಕಾಸರಗೋಡು, ಜೂ.4: ಪರಿಸರ ಸಂರಕ್ಷಣೆಗೆ ಸೃಜನಾತ್ಮಕ ಮಾದರಿಯಾಗಿ ಕಾಸರಗೋಡು ಜಿಲ್ಲೆಯಲ್ಲಿ ಸಮೃದ್ಧವಾಗಿ ಎಲ್ಲೆಡೆ ವೃದ್ಧಿಗೊಳ್ಳಲಿವೆ ಹಸುರು ದ್ವೀಪಗಳು. 

            ಇದರ ಅಂಗವಾಗಿ ಇಲ್ಲಿನ 40 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಿರ್ಮಾಣಗೊಳ್ಳಲಿವೆ 431 ಹಸುರು ದ್ವೀಪಗಳು. 114.18 ಎಕ್ರೆ ಜಾಗದಲ್ಲಿ ಇವು ನಡೆಯಲಿವೆ. ಸಮಾಜ ಅರಣ್ಯೀಕರಣ ಇಲಾಖೆಯಿಂದ ಲಭಿಸಿದ ಮರವಾಗಿ ಬೆಳೆಯಬಲ್ಲ ಸಸಿಗಳು, ಸ್ಥಳೀಯ ಮಟ್ಟದಲ್ಲಿ ಬೆಳೆಯಲಾದ 5 ಸಾವಿರ ಸಸಿಗಳನ್ನು ಸೇರಿಸಿ ಒಟ್ಟು 41884 ಮರವಾಗಿ ಬೆಳೆಯಬಲ್ಲ ಸಸಿಗಳನ್ನು ಅಂದು ಹಸುರು ದ್ವೀಪ ಯೋಜನೆ ಅಂಗವಾಗಿ ನೆಡಲಾಗುವುದು. 

           ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನೌಕರಿ ಖಾತರಿ ಯೋಜನೆ ಮುಖಾಂತರ ಹಸುರು ದ್ವೀಪಗಳ ನಿರ್ಮಾಣ ನಡೆಯಲಿದೆ. ಗುಂಡಿ ತೋಡುವಿಕೆ, ಸಸಿ ನೆಡುವಿಕೆ, ಜೈವಿಕ ಬೇಲಿ ನಿರ್ಮಾಣ, ಸಂರಕ್ಷಣೆ ಚಟುವಟಿಕೆಗಳು ಇತ್ಯಾದಿಗಳು ನೌಕರಿ ಖಾತರಿ ಯೋಜನೆಯ ಮೂಲಕ ನಡೆಯಲಿವೆ. ಕುಟುಂಬಶ್ರೀ, ಸ್ವಯಂ ಸೇವಾ ಸಂಘಟನೆಗಳ, ಆರಾಧನಾಲಯಗಳ, ಗ್ರಂಥಾಲಯಗಳ, ಶಾಲಾ ರಕ್ಷಕ-ಶಿಕ್ಷಕ ಸಂಘಗಳ, ಎಸ್.ಎಸ್.ಜಿಗಳ ಕಾರ್ಯಕರ್ತರ ಸಹಕಾರದೊಂದಿಗೆ ಹಸುರು ದ್ವೀಪಗಳ ನಿರ್ಮಾಣ ನಡೆಯಲಿದೆ. 

             ಹಸುರು ದ್ವೀಪ ಯೋಜನೆಗೆ ಅಗತ್ಯವಿರುವ ಬಹುತೇಕ ಸಸಿಗಳು ಸಮಾಜ ಅರಣ್ಯೀಕರಣ ಇಲಾಖೆಯಿಂದ ಲಭಿಸುತ್ತದೆ. ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣಾಲಯಗಳಲ್ಲಿ ಇಲಾಖೆಯೊಂದಿಗೆ ಸಹಕರಿಸಿ " ಪುಟ್ಟ ಕೈಗಳಲ್ಲಿ ಪುಟ್ಟ ಸಸಿಗಳು" ಎಂಬ ಯೋಜನೆ ಜಾರಿಗೊಳಿಸಲಾಗಿತ್ತು. ಈ ಯೋಜನೆಯ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಸುಮಾರು 8 ಸಾವಿರ ಮಕ್ಕಳು ನೋಂದಣಿ ನಡೆಸಿದ್ದು, 40 ಸಾವಿರ ಹಣ್ಣು ಕೊಡುವ ಮರವಾಗಬಲ್ಲ ಸಸಿಗಳನ್ನು ನೆಟ್ಟು ಬೆಳೆಸಿದ್ದರು ಎಂಬುದು ಗಮನಾರ್ಹ ಸಾಧನೆಯಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries